alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ರೈನೇಜ್ ನಲ್ಲಿದ್ದ ದುಡ್ಡಿನ ರಾಶಿಗೆ ಮುಗಿಬಿದ್ದ ಜನ

visaka-pat

ವಿಶಾಖಪಟ್ಟಣ: ದೇಶದಲ್ಲಿ ಕಾಳಧನಿಕರಿಗೆ ಕಡಿವಾಣ ಹಾಕುವ ಉದ್ದೇಶದಿಂದ, ಕೈಗೊಂಡ ನಿರ್ಧಾರ ಸರಿಯಾಗಿಯೇ ಬಿಸಿ ಮುಟ್ಟಿಸಿದೆ.

ತಮ್ಮಲ್ಲಿರುವ 500 ರೂ., 1000 ರೂ. ಮುಖಬೆಲೆಯ ನೋಟುಗಳನ್ನು ಏನು ಮಾಡಬೇಕೆಂದು ತಿಳಿಯದಾಗಿರುವ ಕಾಳಧನಿಕರು, ನೋಟುಗಳನ್ನು ಸುಟ್ಟು ಹಾಕಿದ್ದಾರೆ. ಕೆಲವೆಡೆ ಮೂಟೆಗಳಲ್ಲಿ ತುಂಬಿ ಬಿಸಾಕಿದ್ದಾರೆ. ಆಂಧ್ರಪ್ರದೇಶದಲ್ಲಿ ಒಳಚರಂಡಿಯಲ್ಲಿ ನೋಟಿನ ರಾಶಿಯೇ ಕಂಡು ಬಂದಿದೆ. ವಿಶಾಖಪಟ್ಟಣದ ಭಾನುನಗರದಲ್ಲಿ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಒಳಚರಂಡಿಯಲ್ಲಿ ಹಾಕಲಾಗಿದೆ.

ಇವುಗಳಲ್ಲಿ 100 ರೂ ಮುಖಬೆಲೆಯ ನೋಟುಗಳು ಕೂಡ ಇದ್ದು, ಅವುಗಳನ್ನು ಹರಿದುಹಾಕಲಾಗಿದೆ. ಒಳಚರಂಡಿಯಲ್ಲಿ ನೋಟಿನ ರಾಶಿ ಬಿದ್ದಿದೆ ಎಂಬ ಸುದ್ದಿ ಹರಡಿ ಜನ ಈ ನೋಟುಗಳನ್ನು ಸಂಗ್ರಹಿಸಿಲು ಮುಗಿಬಿದ್ದಿದ್ದಾರೆ. ಇದರಿಂದಾಗಿ ಸಂಚಾರಕ್ಕೂ ತೊಂದರೆಯಾಗಿದೆ. ಕೊನೆಗೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...