alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿಗೆ ಸಂಚಾರ ನಿಲ್ಲಿಸಿದ ಯುನೈಟೆಡ್ ಏರ್ ಲೈನ್ಸ್

ನವದೆಹಲಿ: ಭಾರೀ ವಾಯು ಮಾಲಿನ್ಯದಿಂದಾಗಿ ದೆಹಲಿ ಗ್ಯಾಸ್ ಚೇಂಬರ್ ನಂತಾಗಿದ್ದು, ಸೋಮವಾರದವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಸಮ – ಬೆಸ ವಾಹನಗಳ ಸಂಚಾರ, ವಾಹನಗಳ ಪಾರ್ಕಿಂಗ್ ಶುಲ್ಕದಲ್ಲಿ 4 ಪಟ್ಟು ಹೆಚ್ಚಳ ಸೇರಿದಂತೆ ಮಾಲಿನ್ಯ ನಿಯಂತ್ರಣಕ್ಕೆ ಅನೇಕ ಕ್ರಮ ಕೈಗೊಳ್ಳಲಾಗಿದೆ.

ದೆಹಲಿಯಲ್ಲಿ ವಾತಾವರಣ ಭಾರೀ ಹದಗೆಟ್ಟಿರುವುದರಿಂದ ಯುನೈಟೆಡ್ ಏರ್ ಲೈನ್ಸ್ ನ್ಯೂಯಾರ್ಕ್ – ದೆಹಲಿ ನಡುವೆ ಶನಿವಾರ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ನ್ಯೂಯಾರ್ಕ್ ನಿಂದ ದೆಹಲಿಗೆ ಆಗಮಿಸಬೇಕಿದ್ದ ವಿಮಾನಗಳನ್ನು ತಡೆಯಲಾಗಿದೆ.

ದೆಹಲಿ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿರುವುದರಿಂದ ಸಾರ್ವಜನಿಕ ಆರೋಗ್ಯದ ಹಿತದೃಷ್ಠಿಯಿಂದ ತುರ್ತು ಕ್ರಮ ಕೈಗೊಳ್ಳಲಾಗಿದೆ. ದೆಹಲಿಯ ಸರ್ಕಾರಿ ಏಜೆನ್ಸಿಗಳ ಸಲಹೆಗಳನ್ನು ಪಡೆಯಲಾಗಿದೆ ಎಂದು ಯನೈಟೆಡ್ ಏರ್ ಲೈನ್ಸ್ ಪ್ರತಿನಿಧಿ ಹೇಳಿದ್ದಾರೆ.

ಶನಿವಾರ ತಾತ್ಕಾಲಿಕವಾಗಿ ಸಂಚಾರ ನಿಲ್ಲಿಸಲಾಗಿದೆ. ಮುಂದೆ ಇದೇ ರೀತಿಯ ಸ್ಥಿತಿ ಮುಂದುವರೆದಲ್ಲಿ ಮತ್ತೆ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದ ಮಾಹಿತಿ ಪ್ರಕಾರ, ದೆಹಲಿ ಏರ್ ಕ್ವಾಲಿಟಿ ಇಂಡೆಕ್ಸ್ ತೀವ್ರ ಮಟ್ಟಕ್ಕೆ ತಲುಪಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...