alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದುರ್ಗೆಗೆ ನವಮಿಯಂದು ನವಜಾತ ಶಿಶುವಿನ ರಕ್ತದ ಅಭಿಷೇಕ

ನವರಾತ್ರಿಯ ನವಮಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಭಕ್ತರು ಸಂಪ್ರದಾಯದಂತೆ ದುರ್ಗೆಗೆ ಪೂಜೆ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿಯೂ ನವರಾತ್ರಿ ಸಡಗರ ಮನೆ ಮಾಡಿದೆ. ಗೋರಕ್ಪುರದ ಬನ್ಸ್ಗಾಂವ್ ಪಟ್ಟಣದಲ್ಲಿರುವ ದೇವಿಗೆ ನವರಾತ್ರಿಯ ನವಮಿಯಂದು ಆ ಪ್ರದೇಶದ ಕ್ಷತ್ರಿಯರು ರಕ್ತವನ್ನು ಅರ್ಪಿಸುತ್ತಾರೆ. ನವಜಾತ ಶಿಶುವಿನಿಂದ ಹಿಡಿದು 100 ವರ್ಷದ ವೃದ್ಧರವರೆಗೆ ಕ್ಷತ್ರಿಯ ಕುಟುಂಬದ ಪ್ರತಿಯೊಬ್ಬರು ತಮ್ಮ ದೇಹದ ರಕ್ತವನ್ನು ತಾಯಿಗೆ ಅರ್ಪಿಸುತ್ತಾರೆ.

ದೇಹದ ಕೆಲ ಅಂಗಗಳನ್ನು ಕತ್ತರಿಸಿಕೊಳ್ಳುವ ಜನರು ರಕ್ತವನ್ನು ತಾಯಿಗೆ ಅಭಿಷೇಕ ಮಾಡ್ತಾರೆ. ನವಜಾತ ಶಿಶುಗಳು ನೋವು ತಾಳಲಾರದೆ ಅಳ್ತಾ ಇದ್ರೆ ಪಾಲಕರು ಭಯ-ಭಕ್ತಿಯಿಂದ ರಕ್ತ ನೀಡ್ತಾರೆ. ನವಜಾತ ಶಿಶುಗಳ ರಕ್ತವನ್ನು ದೇವಿಗೆ ನೀಡುವುದ್ರಿಂದ ಮಕ್ಕಳಿಗೆ ಯಾವ ರೋಗವೂ ಬರುವುದಿಲ್ಲ ಎಂಬುದು ಅವರ ನಂಬಿಕೆ.

ಗೋರಕ್ಪುರದಿಂದ 40 ಕಿಲೋಮೀಟರ್ ದೂರದಲ್ಲಿರುವ ಈ ದೇವಸ್ಥಾನದಲ್ಲಿ ಪ್ರತಿದಿನ ಭಕ್ತರ ದಂಡು ನೆರೆದಿರುತ್ತದೆ. ನವರಾತ್ರಿಯಲ್ಲಿ ದೇವಸ್ಥಾನಕ್ಕೆ ಬರುವವರ ಸಂಖ್ಯೆ ದುಪ್ಪಟ್ಟಾಗುತ್ತದೆ. ಕ್ಷತ್ರಿಯ ಪುರುಷರು ಇಲ್ಲಿಗೆ ಬಂದು ತಾಯಿಗೆ ರಕ್ತದ ಅಭಿಷೇಕ ಮಾಡ್ತಾರೆ. ದೇಶ-ವಿದೇಶದಲ್ಲಿ ನೆಲೆಸಿರುವ ಭಕ್ತರೂ ಇಲ್ಲಿಗೆ ಬರ್ತಾರಂತೆ.

ಕ್ಷತ್ರಿಯ ಜನಾಂಗದ ಪುರುಷರು ಪ್ರತಿವರ್ಷ ರಕ್ತ ನೀಡುವುದು ಇಲ್ಲಿ ಅನಿವಾರ್ಯ. ಕಳೆದ 9 ವರ್ಷಗಳ ಹಿಂದೆ ಪ್ರಾಣಿಯನ್ನು ಬಲಿಕೊಡಲಾಗುತ್ತಿತ್ತಂತೆ. ಆದ್ರೀಗ ಅದನ್ನು ನಿಲ್ಲಿಸಲಾಗಿದೆ. ಮದುವೆಯಾಗದ ಯುವಕರ ಒಂದು ಅಂಗವನ್ನು ಕತ್ತರಿಸಲಾಗುತ್ತದೆ. ಮದುವೆಯಾದ ಪುರುಷರು ದೇಹದ 9 ಭಾಗಗಳಿಗೆ ಕತ್ತರಿ ಹಾಕ್ತಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...