alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡ್ತೀರಾ? ಸಾಮಾಜಿಕ ಜಾಲತಾಣದಲ್ಲಿ ಬರುತ್ತೆ ಫೋಟೋ

ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವವರು ಇನ್ಮುಂದೆ ಎಚ್ಚರಿಕೆಯಿಂದಿರಿ. ಅಲಹಾಬಾದ್ ನ ಸಂಗಮ್ ನಗರದಲ್ಲಿ ಮೂತ್ರ ವಿಸರ್ಜನೆಗೆ ಕಡಿವಾಣ ಹಾಕಲು ಸೂ-ಸೂ ತಂಡ ರಚಿಸಲಾಗಿದೆ.

ಸೂ-ಸೂ ತಂಡ ನಗರದ ಎಲ್ಲ ಪ್ರದೇಶಗಳನ್ನು ಸುತ್ತಲಿದೆ. ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವವರು ಕಂಡಲ್ಲಿ ಅವ್ರ ಫೋಟೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಲಿದೆ. ಜೊತೆಗೆ ನಗರದ ಪ್ರಮುಖ ಪ್ರದೇಶಗಳಲ್ಲಿ ಫೋಟೋವನ್ನು ಅಂಟಿಸಲಿದೆ. ಇದ್ರಿಂದ ಮರ್ಯಾದೆ ಹೋಗುತ್ತೆ ಎಂಬ ಭಯಕ್ಕೆ ಜನರು ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ಬಿಡ್ತಾರೆ ಎಂಬ ನಂಬಿಕೆ ಸ್ಥಳೀಯ ಆಡಳಿತದ್ದಾಗಿದೆ.

ಸ್ವಚ್ಛ ಭಾರತ ಅಭಿಯಾನದಡಿ ರಸ್ತೆ ಬದಿಯಲ್ಲಿ ಕಸ ಹಾಕುವವರ ವಿರುದ್ಧವೂ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಿದೆ. ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ರೆ 20 ರೂಪಾಯಿ ದಂಡ ವಿಧಿಸಲಿದೆ. ಕಸ ಹಾಕುವವರಿಗೂ ಸ್ಥಳೀಯ ಆಡಳಿತ ದಂಡ ವಿಧಿಸಲಿದೆ. ಈವರೆಗೆ 2.5 ಲಕ್ಷ ದಂಡದ ಮೊತ್ತ ಸಂಗ್ರಹವಾಗಿದೆಯಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...