alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲೇ ನಿರಂತರ ಅತ್ಯಾಚಾರ, ಹೀಗಿದೆ ಮಹಿಳೆ ಪ್ರತಿರೋಧ

donkey up

ಲಖ್ನೋ: ಮಹಿಳೆಯೊಬ್ಭಳ ಮೇಲೆ. ಗಂಡನ ತಂದೆ ಹಾಗೂ ಹಿರಿಯ ಸಹೋದರ, ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ, ಉತ್ತರಪ್ರದೇಶದಲ್ಲಿ ನಡೆದಿದ್ದು, ಇದನ್ನು ಪ್ರತಿಭಟಿಸುವ ಸಲುವಾಗಿ ಮಹಿಳೆ, ಕತ್ತೆಗಳಿಗೆ ಆರೋಪಿಗಳ ಹೆಸರಿನ ಫಲಕ ನೇತು ಹಾಕಿ ಪ್ರತಿಭಟನೆ ಮಾಡಿದ್ದಾಳೆ.

ಲಖ್ನೋದಿಂದ 90 ಕಿಲೋಮೀಟರ್ ದೂರದ ಗ್ರಾಮವೊಂದರಲ್ಲಿ 1 ವರ್ಷದ ಹಿಂದೆ ಮಹಿಳೆಗೆ ಮದುವೆಯಾಗಿತ್ತು. ಆಕೆಯ ಪತಿ ಅಂಗಡಿಯೊಂದನ್ನು ನಡೆಸುತ್ತಿದ್ದ. ಮದುವೆಯಾದ ಕೆಲ ದಿನಗಳಲ್ಲೇ ಗಂಡ, ತನ್ನ ತಂದೆ ಹಾಗೂ ಹಿರಿಯ ಸಹೋದರನೊಂದಿಗೆ ಸೆಕ್ಸ್ ಮಾಡುವಂತೆ ಬಲವಂತ ಮಾಡಿದ್ದಾನೆ. ಇದಕ್ಕೆ ಒಪ್ಪದಿದ್ದಾಗ, ಬೆದರಿಸಿ, ಆಕೆಯ ಮಾವ ಹಾಗೂ ಗಂಡನ ಅಣ್ಣ ಅತ್ಯಾಚಾರ ಎಸಗಿದ್ದಾರೆ. ಇದನ್ನು ವಿರೋಧಿಸಿ ಮಹಿಳೆ ಕತ್ತೆಗಳಿಗೆ ಆರೋಪಿಗಳ ಹೆಸರಿದ್ದ ಫಲಕ ನೇತು ಹಾಕಿ ಪ್ರತಿಭಟನೆ ನಡೆಸಿದ್ದಾಳೆ.

ಮೊದಲು ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿತ್ತು. ಜೈಲಿನಿಂದ ಹೊರ ಬಂದ ನಂತರ ಜೀವಬೆದರಿಕೆ ಹಾಕಿದ್ದರಿಂದ ಮಹಿಳೆ, ಗಂಡನ ಅಂಗಡಿಯ ಎದುರಿನಲ್ಲೇ ಪ್ರತಿಭಟನೆ ನಡೆಸಿದ್ದು, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...