alex Certify
ಕನ್ನಡ ದುನಿಯಾ       Mobile App
       

Kannada Duniya

ವರನಿಗೆ ಸಿಕ್ತು ಇಂಥ ವಿಚಿತ್ರ ವರದಕ್ಷಿಣೆ….

ನವ ದಂಪತಿಗೆ ಸ್ನೇಹಿತರು, ಸಂಬಂಧಿಕರು ಚಿತ್ರವಿಚಿತ್ರ ಉಡುಗೊರೆ ನೀಡ್ತಾರೆ. ಆದ್ರೆ ವರದಕ್ಷಿಣೆ ರೂಪದಲ್ಲಿ ಇಂಥ ವಿಚಿತ್ರ ವಸ್ತು ಸಿಕ್ಕಿರುವುದನ್ನು ನೀವು ಕೇಳಿರಲು ಸಾಧ್ಯವೇ ಇಲ್ಲ. ಹರಿಯಾಣದಲ್ಲಿ ಫತೇಹಾಬಾದ್ ಟೊಹಾನಾದಲ್ಲಿ ಯುವಕನೊಬ್ಬನಿಗೆ ವರದಕ್ಷಿಣೆ ರೂಪದಲ್ಲಿ ಮಂಗ ಸಿಕ್ಕಿದೆ.

ಆಶ್ಚರ್ಯವಾದ್ರೂ ಇದು ಸತ್ಯ. ನಗರದ ಪ್ರಸಿದ್ಧ ಉದ್ಯಮಿ ಸಂಜಯ್ ಪೂನಿಯಾ  ಸೋದರಳಿಯ ಕರ್ಮವೀರ್ ಪೂನಿಯಾ ಮದುವೆ ಫೆಬ್ರವರಿ 11ರಂದು ನಡೆಯಿತು. ಕರ್ಮವೀರ್ ಕುಟುಂಬಸ್ಥರ ಬಳಿ ನೂರಾರು ಎಕರೆ ಜಮೀನಿದೆ. ಪಕ್ಕದಲ್ಲಿಯೇ ಶಿವನ ದೇವಸ್ಥಾನವಿದ್ದು ಕೋತಿಗಳ ಹಾವಳಿ ಹೆಚ್ಚಾಗಿದೆ.

ಈ ಬಗ್ಗೆ ಚಿಂತನೆ ನಡೆಸಿದ ವಧು ಕಡೆಯವರು ಕೋತಿಯನ್ನು ವರದಕ್ಷಿಣೆ ರೂಪದಲ್ಲಿ ನೀಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ವರನ ಕಡೆಯವರಿಗೆ ಹೇಳಿದ್ದು ಅವರೂ ಒಪ್ಪಿದ್ದಾರೆ. ಮದುವೆ ನಂತ್ರ ಕೋತಿ ತನ್ನ ಕೆಲಸ ಶುರು ಮಾಡಿದೆ. ಜಮೀನಿಗೆ ಬರುವ ಇತರ ಕೋತಿಗಳನ್ನು ಓಡಿಸ್ತಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...