alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲ ಬರ್ತಿರುವ ಬಾಲಕನನ್ನು ನೋಡಿ ಭಜರಂಗಿ ಎನ್ನುತ್ತಿದ್ದಾರೆ ಜನ..!

ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಮೂರು ವರ್ಷದ ಬಾಲಕನಿಗೆ ಬಾಲ ಬಂದಿದೆ. ಇದನ್ನು ನೋಡಿದ ಜನರು ಬಾಲಕ ದೇವರ ರೂಪವೆನ್ನುತ್ತಿದ್ದಾರೆ. ಆತನಿಗೆ ಭಜರಂಗಿ ಎಂದು ಹೆಸರಿಟ್ಟಿದ್ದಾರೆ. ಈತನನ್ನು ನೋಡಲು ಜನರು ದೂರದೂರುಗಳಿಂದ ಬರ್ತಿದ್ದಾರೆ.

ಬಾಲ ಕತ್ತರಿಸಲು ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ಹೇಳಿದ್ದಾರೆ. ಇದಕ್ಕೆ ಮೊದಲು ಬಾಲಕನ ಅಪ್ಪ ಒಪ್ಪಿರಲಿಲ್ಲವಂತೆ. ನಂತ್ರ ಒಪ್ಪಿಗೆ ನೀಡಿದ್ದಾನೆ. ಆದ್ರೆ ಆತ ಒಪ್ಪಿಗೆ ನೀಡ್ತಿದ್ದಂತೆ ಮನೆಯವರ ಆರೋಗ್ಯ ಹದಗೆಟ್ಟಿದೆ. ಹಾಗಾಗಿ ಶಸ್ತ್ರಚಿಕಿತ್ಸೆ ನಡೆಸಲು ಭಯವಾಗ್ತಿದೆ ಎಂದು ಬಾಲಕನ ತಾಯಿ ಹೇಳಿದ್ದಾಳೆ.

2011ರಲ್ಲಿ ರಾಮಸುಂದರ್ ಮದುವೆ ಕವಿತಾ ಜೊತೆ ನಡೆದಿತ್ತು. 2014ರಲ್ಲಿ ಮಗ ಕೃಷ್ಣ ಜನಿಸಿದ್ದಾನೆ. ಆರಂಭದಲ್ಲಿ ಮನೆಯವರು ಈ ಬಗ್ಗೆ ಹೆಚ್ಚು ಗಮನ ನೀಡಲಿಲ್ಲ. ಆದ್ರೆ ಕೃಷ್ಣ ದೊಡ್ಡವನಾಗ್ತಿದ್ದಂತೆ ಆತನ ಬಾಲ ಕೂಡ ಬೆಳೆಯಲು ಶುರುವಾಗಿದೆ. ತಂದೆ ದೆಹಲಿಯಲ್ಲಿ ಕೆಲಸ ಮಾಡ್ತಿದ್ದಾನೆ. ಮಗನನ್ನು ದೂರದೂರಿನಿಂದ ಜನ ನೋಡಲು ಬರ್ತಿದ್ದು ಇದೇ ಕಾರಣಕ್ಕೆ ಊರಿನವರು ಕೂಡ ಆತನನ್ನು ಭಜರಂಗಿ ಎಂದು ನಂಬಲು ಶುರುಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...