alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣದಲ್ಲಿ ವೈರಲ್ ಆಗಿದೆ ಸಚಿವೆಯ ಈ ವಿಡಿಯೋ

ಕೇಂದ್ರ ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮನೇಕಾ ಗಾಂಧಿ, ಅಧಿಕಾರಿಯೊಬ್ಬರ ಮೇಲೆ ಹರಿಹಾಯ್ದಿದ್ದಾರೆ, ಅವರನ್ನು ನಿಂದಿಸಿದ್ದಾರೆ. ಅಷ್ಟೇ ಅಲ್ಲ ಅಧಿಕಾರಿಯ ತೂಕದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಉತ್ತರ ಪ್ರದೇಶದ ಬಹೇರಿ ಎಂಬಲ್ಲಿ ಮನೇಕಾ ಗಾಂಧಿ ಪಿಡಿಎಸ್ ಸ್ಕೀಮ್ ಅನುಷ್ಠಾನದ ಪರಿಶೀಲನೆಗೆ ತೆರಳಿದ್ರು. ಆ ಅಧಿಕಾರಿ ಭ್ರಷ್ಟ ಅಂತಾ ಸಭೆಯಲ್ಲಿ ಕೆಲವರು ಆರೋಪ ಮಾಡಿದ್ರು. ಅಧಿಕಾರಿ ಮೇಲೆ ಕೋಪಗೊಂಡ ಮನೇಕಾ, ಅವರನ್ನು ಕೆಟ್ಟ ಪದಗಳಿಂದ ಎಲ್ಲರ ಸಮ್ಮುಖದಲ್ಲೇ ನಿಂದಿಸಿದ್ದಾರೆ. ಅವಮಾನ ಮಾಡಿದ್ದಾರೆ. ಸಭೆಯಲ್ಲಿದ್ದ ಇತರರು ಕೂಡ ಅಧಿಕಾರಿಯನ್ನು ಹೀಯಾಳಿಸಲು ಆರಂಭಿಸಿದ್ರು.

ಸಚಿವೆಯ ಈ ವರ್ತನೆ ಬಗ್ಗೆ ಖಂಡನೆ ವ್ಯಕ್ತವಾಗಿದೆ. ಅಷ್ಟೇ ಅಲ್ಲ ಮನೇಕಾ ಗಾಂಧಿ ಅಧಿಕಾರಿಯನ್ನು ನಿಂದಿಸಿರುವ ವಿಡಿಯೋ ಸಹ ಈಗಾಗ್ಲೇ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...