alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಂದ್ರ ಸಚಿವ ವಿ.ಕೆ. ಸಿಂಗ್ ಪತ್ನಿಗೆ ಬ್ಲಾಕ್ ಮೇಲ್

vk-singh-wife-bharti-singh_

ಕೇಂದ್ರ ಸಚಿವ  ವಿ.ಕೆ. ಸಿಂಗ್ ಪತ್ನಿ ಭಾರತಿ ಸಿಂಗ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪರಿಚಯಸ್ಥನೊಬ್ಬ ಬ್ಲಾಕ್ ಮೇಲ್ ಮಾಡಿ 2 ಕೋಟಿ ಹಣ ನೀಡುವಂತೆ ಬೆದರಿಕೆಯೊಡ್ಡಿದ್ದಾನೆಂದು ಭಾರತಿ ಸಿಂಗ್ ದೂರಿದ್ದಾರೆ. ಪ್ರದೀಪ್ ಚೌಹಾಣ್ ಎಂಬಾತ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ. ನನಗೆ ಹಾಗೂ ಕುಟುಂಬದವರಿಗೆ ಪ್ರಾಣ ಬೆದರಿಕೆಯೊಡ್ಡಿದ್ದಾನೆಂದು ಭಾರತಿ ದೂರು ದಾಖಲಿಸಿದ್ದಾರೆ.

ದೆಹಲಿಯ ತುಘಲಕ್ ರಸ್ತೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆಗಸ್ಟ್ ಆರರಂದು ತನ್ನ ಜೊತೆ ನಡೆಸಿದ ಸಂಭಾಷಣೆಯನ್ನು ರೆಕಾರ್ಡ್ ಮಾಡಿರುವ ಪ್ರದೀಪ್, ಸಾಮಾಜಿಕ ಜಾಲತಾಣದಲ್ಲಿ ಇದನ್ನು ಪೋಸ್ಟ್ ಮಾಡುವುದಾಗಿ ಬೆದರಿಸಿದ್ದಾನೆ. ಅಲ್ಲದೆ 2 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಪರವಾನಿಗೆ ಇರುವ ರಿವಾಲ್ವರ್ ಹಿಡಿದುಕೊಂಡು ಬೆದರಿಸುತ್ತಿದ್ದಾನೆಂದು ಭಾರತಿ ದೂರಿದ್ದಾರೆ.

ಆಡಿಯೋ ಹಾಗೂ ವಿಡಿಯೋ ಕ್ಲಿಪ್ ಗಳನ್ನು ಪೋಸ್ಟ್ ಮಾಡುವುದಾಗಿ ಆತ ಬೆದರಿಕೆಯೊಡ್ಡಿದ್ದಾನಂತೆ. ಆದ್ರೆ ಅದರಲ್ಲಿ ಏನಿದೆ ಎನ್ನುವ ಬಗ್ಗೆ ಭಾರತಿಗೆ ಸ್ಪಷ್ವವಾಗಿ ತಿಳಿದಿಲ್ಲವಂತೆ. ಪತಿ ವಿಕೆ ಸಿಂಗ್ ಖ್ಯಾತಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಈ ಕೆಲಸ ಮಾಡ್ತಿದ್ದಾನೆಂದು ಭಾರತಿ ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...