alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ನಿಧನ

anil-madhav-dave_650x400_81475373436

ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ದವೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಅನಿಲ್ ಅವರ ಹಠಾತ್ ನಿಧನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.”ನಿನ್ನೆ ಸಂಜೆವರೆಗೂ ಅನಿಲ್ ಮಾಧವ್ ಅವರ ಜೊತೆಗಿದ್ದೆ, ಪ್ರಮುಖ ವಿಷಯಗಳ ಬಗ್ಗೆ ಇಬ್ಬರೂ ಚರ್ಚೆ ನಡೆಸಿದ್ದೆವು. ಆದ್ರೆ ದಿಢೀರನೆ ಅವರ ಸಾವಿನ ಸುದ್ದಿ ಬಂದೆರಗಿದೆ, ಇದು ವೈಯಕ್ತಿಕವಾಗಿಯೂ ನನಗೆ ಅಪಾರ ನಷ್ಟ ತಂದಿದೆ” ಅಂತಾ ಮೋದಿ ಟ್ವೀಟ್ ಮಾಡಿದ್ದಾರೆ.

ಪರಿಸರ ಸಂರಕ್ಷಣೆ ಬಗ್ಗೆ ಅನಿಲ್ ಮಾಧವ್ ಅತೀವ ಕಾಳಜಿ ಹೊಂದಿದ್ದರು. ಅವರನ್ನು ಸಮಾಜ ಸೇವಕ ಎಂದೇ ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಅಂತಾ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಅನಿಲ್ ಮಾಧವ್ ಹಲವು ವರ್ಷಗಳಿಂದ ಆರ್ ಎಸ್ ಎಸ್ ಜೊತೆಗೆ ನಂಟು ಹೊಂದಿದ್ದಾರೆ. ಕಳೆದ ವರ್ಷವಷ್ಟೆ ಅವರನ್ನು ಪರಿಸರ ಸಚಿವರಾಗಿ ನೇಮಕ ಮಾಡಲಾಗಿತ್ತು.

ಅನಿಲ್ ಮಾಧವ್ ಅವರು ಮಧ್ಯಪ್ರದೇಶದ ರಾಜ್ಯಸಭಾ ಸದಸ್ಯರಾಗಿದ್ದರು. ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆ ಫೋರಂ ಸೇರಿದಂತೆ ಸಂಸತ್ತಿನ ಹಲವು ಸಮಿತಿಗಳಲ್ಲಿ ಕೂಡ ಅನಿಲ್ ಮಾಧವ್ ಸದಸ್ಯರಾಗಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...