alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಡರ್ನ್ ಆಗಲಿದೆ ರೈಲ್ವೆ: ನಿಲ್ದಾಣದಲ್ಲಿ ವೈಫೈ

ಬಜೆಟ್ ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ರೈಲ್ವೆಗೆ ಒಂದು ಲಕ್ಷ 46 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಈ ಬಾರಿ ಬಜೆಟ್ ನಲ್ಲಿ ಭಾರತೀಯ ರೈಲ್ವೆಯನ್ನು ಆಧುನೀಕರಣಗೊಳಿಸುವತ್ತ ಚಿತ್ತ ಹರಿಸಲಾಗಿದೆ. ರೈಲ್ವೆ ಆಧುನೀಕರಣಗೊಳಿಸಲು ಹಲವಾರು ಘೋಷಣೆಗಳನ್ನು ಜೇಟ್ಲಿ ಮಾಡಿದ್ದಾರೆ.

ರೈಲ್ವೆ ಸಾಮರ್ಥ್ಯದ ಬಗ್ಗೆ ಗಮನ ನೀಡಲಾಗುವುದು ಎಂದು ಜೇಟ್ಲಿ, ಬಜೆಟ್ ನಲ್ಲಿ ಹೇಳಿದ್ದಾರೆ. ರೈಲ್ವೆ ನೆಟ್ವರ್ಕನ್ನು ವಿದ್ಯುದೀಕರಣ ಮಾಡುವುದಾಗಿ ಜೇಟ್ಲಿ ಘೋಷಣೆ ಮಾಡಿದ್ದಾರೆ. 3600 ಕಿಲೋಮೀಟರ್ ಟ್ರ್ಯಾಕ್ ನವೀಕರಣದ ಗುರಿಯನ್ನು  ಪ್ರಸ್ತುತ ಆರ್ಥಿಕ ವರ್ಷದಲ್ಲಿ ಇರಿಸಲಾಗಿದೆ.

ಮುಂದಿನ ಎರಡು ವರ್ಷಗಳಲ್ಲಿ 4000 ಮಾನವ ರಹಿತ ಕ್ರಾಸಿಂಗ್ ತೆಗೆದು ಹಾಕುವುದಾಗಿ ಜೇಟ್ಲಿ ಹೇಳಿದ್ದಾರೆ. 25000 ಫುಟ್ಫಾಲ್ಸ್ ನಲ್ಲಿ ಎಸ್ಕಲೇಟರ್ ಗಳನ್ನು ಹಾಕಲಾಗುವುದು ಎಂದು ಜೇಟ್ಲಿ ಹೇಳಿದ್ದಾರೆ.

ಎಲ್ಲ ರೈಲು ಹಾಗೂ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ನೀಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. 2018-2019 ರಲ್ಲಿ ಮಾಡಲ್ ರೈಲ್ವೆ ಪರಿಚಯ ಮಾಡುವುದಾಗಿ ಜೇಟ್ಲಿ ಹೇಳಿದ್ದಾರೆ. ಮುಂಬೈ ಸ್ಥಳೀಯ ರೈಲಿಗೆ ಜೇಟ್ಲಿ 11 ಸಾವಿರ ಕೋಟಿ ನೀಡಿದ್ದಾರೆ. 17 ಸಾವಿರ ಕೋಟಿಯಲ್ಲಿ 160 ಕಿಲೋಮೀಟರ್ ಉಪ-ನಗರ ಜಾಲವನ್ನು ಬೆಂಗಳೂರಿಗೆ ನೀಡಿದ್ದಾರೆ ಜೇಟ್ಲಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...