alex Certify
ಕನ್ನಡ ದುನಿಯಾ       Mobile App
       

Kannada Duniya

ದರೋಡೆ ತಡೆದಿದ್ದಕ್ಕೆ ಸಿಕ್ಕ ಗಿಫ್ಟ್ ಗೆ ಬೇಸರಗೊಂಡು ನೌಕರನೇ ದೋಚಿದ…!

ದರೋಡೆಕೋರರನ್ನು ತಡೆದು ಭಾರೀ ಹಣ ಲೂಟಿಯಾಗುವುದನ್ನು ತಪ್ಪಿಸಿದ ನೌಕರನಿಗೆ ಮಾಲೀಕ ಬೆಲೆಯೇ ಕೊಡದಿದ್ದಾಗ, ಆತ ಬೇಸರಗೊಂಡು ತಾನೇ ದೋಚಿಕೊಂಡು ಹೋಗಿದ್ದಾನೆ!

ಅದೊಂದು ದಿನ ಮಾಲೀಕನಿಗೆ ಸೇರಿದ 80 ಲಕ್ಷ ರೂ. ಅನ್ನು ಧನ್ ಸಿಂಗ್ ಬಿಷ್ತ್ ಸಾಗಿಸುತ್ತಿದ್ದ. ಆ ವೇಳೆ ದಾಳಿಗೈದ ದರೋಡೆಕೋರರನ್ನು ಏಕಾಂಗಿಯಾಗಿ ತಡೆದು ಹಣ ಉಳಿಸಿದ್ದ ಬಿಷ್ತ್. ಅಲ್ಲದೆ ಆ ವೇಳೆ ಮೈಕೈಗೂ ಗಾಯ ಮಾಡಿಕೊಂಡಿದ್ದ. ಕೆಲ ದಿನಗಳ ಕಾಲ ವಿಶ್ರಾಂತಿಯನ್ನೂ ಪಡೆಯಬೇಕಾಗಿ ಬಂದಿತ್ತು. ತನ್ನ ಸಾಹಸಕ್ಕೆ ಮೆಚ್ಚಿ ಮಾಲೀಕ ಹಣದ ಬಹುಮಾನ ನೀಡಬಹುದು ಎಂದು ಬಿಷ್ತ್ ಲೆಕ್ಕಾಚಾರ ಹಾಕಿದ್ದ. ಆದರೆ ಮಾಲೀಕ ಕೇವಲ ಒಂದು ಟಿ ಶರ್ಟ್ ಅನ್ನು ಉಡುಗೊರೆಯಾಗಿ ನೀಡಿದ್ದ. ಇದರಿಂದ ಬೇಸರಗೊಂಡ ಬಿಷ್ತ್ ಮುಂದಿನ ಬಾರಿ ತಾನೇ ಹಣ ದೋಚಬೇಕು ಎಂದು ಸ್ಕೆಚ್ ಹಾಕಿದ.

ಇನ್ನೊಂದು ದಿನ ಗ್ರಾಹಕರೊಬ್ಬರಿಂದ 70 ಲಕ್ಷ ಸಂಗ್ರಹಿಸಿ ತರಲು ಮಾಲೀಕ ಕಳುಹಿಸಿದ. ಆಗ ಗೆಳೆಯ ಯಾಕೂಬ್ ಜತೆ ಸೇರಿಕೊಂಡು ಅಷ್ಟೂ ದುಡ್ಡು ತೆಗೆದುಕೊಂಡು ಬಿಷ್ತ್ ದೆಹಲಿಯಿಂದ ನೈನಿತಾಲ್‌ಗೆ ಪರಾರಿಯಾಗಿದ್ದಾನೆ. ಅಷ್ಟು ದುಡ್ಡನ್ನು ಬ್ಯಾಂಕ್ ಖಾತೆಯಲ್ಲಿ ಜಮೆ ಕೂಡಾ ಮಾಡಿಕೊಂಡ. 4 ಲಕ್ಷ ರೂ. ಅನ್ನು ನೆರವಾದ ಯೂಕೂಬ್‌ಗೆ ಭಕ್ಷೀಸು ಕೂಡಾ ನೀಡಿದ್ದಾನೆ.

ಇತ್ತ ಮಾಲೀಕ ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಮೊದಲು ಯಾಕೂಬ್ ಅನ್ನು ಹಿಡಿದು ಒಳಗೆ ತಳ್ಳಿದ್ದಾರೆ. ಆತನ ಬಾಯಿ ಬಿಡಿಸಿದಾಗ ಬಿಷ್ತ್ ನ ವಂಚನೆ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...