alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ನಿವಾಸದ ಮುಂದೆ ರಿಕ್ಷಾ ಚಾಲಕನಿಗೆ ಕಾದಿತ್ತು ಅಚ್ಚರಿ..!

cycle-rikshaಆ ಸೈಕಲ್ ರಿಕ್ಷಾ ಚಾಲಕ ಎಂದಿನಂತೆ ಬೀಡಿ ಸೇದುತ್ತಾ ಲಕ್ನೋದ ಕಾಳಿದಾಸ ಮಾರ್ಗದಲ್ಲಿ ಗಿರಾಕಿಗಾಗಿ ಕಾಯುತ್ತಿದ್ದ. ಸ್ವಲ್ಪ ಹೊತ್ತಿನಲ್ಲೇ ವ್ಯಕ್ತಿಯೊಬ್ಬರು ಆತನ ರಿಕ್ಷಾ ಏರಿ, ತಾವು ಹೋಗಬೇಕಿದ್ದ ಸ್ಥಳದ ವಿವರ ಹೇಳಿದರು.

ಅಲ್ಲದೇ ಪ್ರಯಾಣದ ಹಾದಿಯಲ್ಲಿ ಆತನ ಕುಟುಂಬ, ಆದಾಯದ ವಿವರಗಳನ್ನು ಸಹಜವಾಗಿಯೇ ವಿಚಾರಿಸಿದ್ದರು. ಆದರೆ ಚಾಲಕನಿಗೆ ತನ್ನ ಸೈಕಲ್ ರಿಕ್ಷಾದಲ್ಲಿ ಕುಳಿತಿರುವವರು ದೇಶದ ಅತಿ ದೊಡ್ಡ ಮೊಬೈಲ್ ವಾಣಿಜ್ಯೋದ್ಯಮ Paytm ಸಿಇಓ ವಿಜಯ್ ಶೇಖರ್ ಶರ್ಮಾ ಎಂಬ ಅರಿವೇ ಇರಲಿಲ್ಲ.

ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ರೊಂದಿಗೆ ಭೇಟಿ ನಿಗದಿಯಾಗಿದ್ದ ಕಾರಣ ತಮ್ಮ ಐಷಾರಾಮಿ ಕಾರಿನಲ್ಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಹೊರಟಿದ್ದ ವಿಜಯ್ ಶೇಖರ್ ಶರ್ಮಾ, ಮಾರ್ಗ ಮಧ್ಯದಲ್ಲಿ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದಾರೆ.

ನಿಗದಿತ ಸಮಯಕ್ಕೆ ಅಖಿಲೇಶ್ ಸಿಂಗ್ ಅವರನ್ನು ಭೇಟಿಯಾಗಬೇಕಿದ್ದ ಕಾರಣ ತಮ್ಮ ಕಾರು ಚಾಲಕನಿಗೆ ಟ್ರಾಫಿಕ್ ಕ್ಲಿಯರ್ ಆದ ನಂತರ ಬರಲು ಹೇಳಿ ತಾವು ಮಣಿರಾಮ್ ನ ಸೈಕಲ್ ರಿಕ್ಷಾ ಏರಿದ್ದರು. ಮುಖ್ಯಮಂತ್ರಿ ನಿವಾಸದ ಗೇಟ್ ಬಳಿಯಲ್ಲಿಯೇ ಮಣಿರಾಮ್ ಅವರನ್ನು ಬಿಡಲು ಹೋದಾಗ ಒಳ ಹೋಗುವಂತೆ ಹೇಳಿದ್ದು, ಅಲ್ಲಿ ಮಣಿರಾಮ್ ಗೆ ಅಚ್ಚರಿ ಕಾದಿತ್ತು. ಖುದ್ದು ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಅವರೇ ಹೊರ ಬಂದು ನಿಂತಿದ್ದರು.

ಬಳಿಕ ಮಣಿರಾಮ್ ನ ಆರ್ಥಿಕ ಪರಿಸ್ಥಿತಿಯನ್ನು ಅರಿತು ಆತನಿಗೆ 6 ಸಾವಿರ ರೂ. ನಗದು ನೀಡಲಾಗಿದೆಯಲ್ಲದೇ, ಒಂದು ಇ ರಿಕ್ಷಾ, ಲಕ್ನೋದಲ್ಲಿ ವಾಸಕ್ಕೆ ಮನೆ ಮತ್ತು ಮಣಿರಾಮ್ ಪತ್ನಿಗೆ ಸಮಾಜವಾದಿ ಪೆನ್ಶನ್ ನೀಡುವ ಭರವಸೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...