alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ನಲ್ಲೇ ವಿಷ ಕುಡಿದು ಆತ್ಮಹತ್ಯೆಗೆತ್ನಿಸಿದ ರೈತ

poison-34455ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಂಡ ಬಳಿಕ ಸಾಮಾನ್ಯ ಜನರ ಸಂಕಷ್ಟ ಹೇಳತೀರದಾಗಿದೆ. ಬ್ಯಾಂಕ್ ಗಳ ಮುಂದೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತರೂ ಸರ್ಕಾರ ನಿಗದಿಪಡಿಸಿರುವ ಗರಿಷ್ಟ ಹಣವನ್ನೂ ಪಡೆಯಲು ಹಲವೆಡೆ ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ಚೆಕ್ ಗಳ ಕ್ಲಿಯರಿಂಗ್ ಸಹ ನಿಗದಿಯಂತೆ ನಡೆಯದ ಕಾರಣ ಜನ ತೊಂದರೆಯನ್ನನುಭವಿಸುತ್ತಿದ್ದಾರೆ.

ಮಧ್ಯ ಪ್ರದೇಶದಲ್ಲಿ ರೈತನೊಬ್ಬ ನವೆಂಬರ್ 24 ರಂದು ತನ್ನ ಖಾತೆಗೆ 24,000 ರೂ. ಗಳ ಚೆಕ್ ಹಾಕಿದ್ದು, ಇಷ್ಟು ದಿನಗಳಾದರೂ ಕ್ಲಿಯರಿಂಗ್ ಆಗದ ಕಾರಣ ತನ್ನ ತುರ್ತು ಅವಶ್ಯಕತೆಗೆ ಹಣ ಪಡೆಯಲು ಸಾಧ್ಯವಾಗದ ಹತಾಶೆಯಿಂದ ಬ್ಯಾಂಕ್ ನಲ್ಲೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಮಧ್ಯಪ್ರದೇಶದ ಮಂಡ್ಸೌರ್ ನ ನಾರಾಯಣಪುರ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿದ್ದು, 45 ವರ್ಷದ ರಾಧೇಶ್ಯಾಮ್ ಪ್ರಜಾಪತಿ ಎಂಬ ರೈತ ತನ್ನ ಖಾತೆಗೆ ಚೆಕ್ ಹಾಕಿದ ಬಳಿಕ ಕ್ಲಿಯರಿಂಗ್ ಆಗಿದೆಯೋ ಇಲ್ಲವೋ ಎಂಬುದರ ಕುರಿತು ಪ್ರತಿನಿತ್ಯ ಬಂದು ವಿಚಾರಿಸಿದ್ದಾನೆ. ಆದರೆ ಈಗ ನಗದು ವಹಿವಾಟು ಮಿತಿಗೊಳಿಸಿರುವುದರಿಂದ ಬಹುತೇಕ ವ್ಯವಹಾರಗಳು ಚೆಕ್ ಮೂಲಕವೇ ನಡೆಯುತ್ತಿರುವ ಕಾರಣ ಇಷ್ಟು ದಿನಗಳಾದರೂ ಪ್ರಜಾಪತಿಯ ಚೆಕ್ ಕ್ಲಿಯರೆನ್ಸ್ ಆಗಿಲ್ಲ. ಇದರಿಂದ ಹತಾಶೆಗೊಂಡ ಆತ, ಬ್ಯಾಂಕ್ ನಲ್ಲೇ ವಿಷ ಸೇವಿಸಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾನೆಂದು ವೈದ್ಯರು ತಿಳಿಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬ್ಯಾಂಕ್ ಅಧಿಕಾರಿಗಳು ಬ್ಯಾಂಕ್ ಗೆ ಬರುತ್ತಿರುವ ಚೆಕ್ ಗಳ ಸಂಖ್ಯೆ ಅಧಿಕವಾಗಿರುವ ಕಾರಣ ಕ್ಲಿಯರೆನ್ಸ್ ಸಿಗಲು ತಡವಾಗುತ್ತಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...