alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೆ ಹಾಜರಾಗಲು ಸಾಧ್ಯವಾಗದ ವರ ಮಾಡಿದ್ದೇನು?

representational-imageಆತನ ವಿವಾಹ ಮೊದಲೇ ನಿಗದಿಯಾಗಿತ್ತು. ಆದರೆ ವಿವಾಹದ ದಿನದಂದು ಕಾರ್ಯದೊತ್ತಡದ ಕಾರಣ ಹಾಜರಾಗಲು ಸಾಧ್ಯವಾಗದ ವರ ಆದರೂ ವಿವಾಹವಾಗಿದ್ದಾನೆ. ಅದು ಹೇಗೆ ಅಂತೀರಾ? ಮುಂದೆ ಓದಿ.

ಕೇರಳದ ಕೊಲ್ಲಂ ಜಿಲ್ಲೆಯ ವೆಲಿಯಾಂ ನ ಹ್ಯಾರಿಸ್, ಸೌದಿ ಅರೇಬಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರ ವಿವಾಹ ಮೆಕ್ಕಾದಲ್ಲಿ ನರ್ಸ್ ಆಗಿರುವ ಶ್ಯಾಮಲಾರೊಂದಿಗೆ ಅಲೆಪ್ಪಿ ಜಿಲ್ಲೆಯ ತಾಮರಕುಳಂನಲ್ಲಿ ನಿಗದಿಯಾಗಿತ್ತು.

ಆದರೆ ವಿವಾಹದ ದಿನದಂದು ಕಾರ್ಯದೊತ್ತಡದ ಕಾರಣ ಹ್ಯಾರಿಸ್ ಗೆ ಬರಲು ಸಾಧ್ಯವಾಗಲಿಲ್ಲ. ಆದರೆ ವಿವಾಹ ಮೊದಲೇ ನಿಗದಿಯಾಗಿದ್ದ ಕಾರಣ ಬಂಧು- ಬಾಂಧವರು ಆಗಮಿಸಿದ್ದರು. ಕಡೆಗೆ ವೆಬ್ ಕ್ಯಾಮ್ ಮೂಲಕ ವಿವಾಹದ ಪ್ರತಿಜ್ಞಾ ವಿಧಿಗಳನ್ನ ಹ್ಯಾರಿಸ್ ಪೂರೈಸಿದ್ದು, ವಿವಾಹ ನೆರವೇರಿದೆ ಎಂದು ಘೋಷಿಸಲಾಯಿತು. ಹೀಗೆ ತನ್ನದೇ ವಿವಾಹ ಸಮಾರಂಭಕ್ಕೆ ವೆಬ್ ಕ್ಯಾಮ್ ಮೂಲಕ ಹ್ಯಾರಿಸ್ ಕೂಡಾ ಸಾಕ್ಷಿಯಾದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...