alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೆ ಹಣ ಹೊಂದಿಸುವಲ್ಲಿ ವಿಫಲ, ಮಗಳನ್ನೇ ಕೊಂದ ತಂದೆ

ಮಗಳ ಮದುವೆಗೆ ಹಣ ಹೊಂದಿಸಲು ವಿಫಲನಾದ ತಂದೆ, ಕೊನೆಗೆ ಮಗಳನ್ನೆ ಕೊಂದ ಘಟನೆ ದೆಹಲಿಯ ಸಂಗಮ್ ವಿಹಾರ್ ಬಡಾವಣೆಯಲ್ಲಿ ನಡೆದಿದೆ.

55 ವರ್ಷದ ನಂದ್ ಕಿಶೋರ್, ಕಬ್ಬಿಣದ ರಾಡ್ ನಿಂದ ಮಗಳನ್ನು ಹೊಡೆದಿದ್ದಾನೆ. ಅಲ್ಲದೆ ಪತ್ನಿ ಹಾಗೂ ಇನ್ನೋರ್ವ ಹೆಣ್ಣು ಮಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದಾಗ ಕವಿತಾ ಸಾವನ್ನಪ್ಪಿರುವ ಬಗ್ಗೆ ವೈದ್ಯರು ಧೃಡಪಡಿಸಿದ್ದಾರೆ. ಇನ್ನು ಪತ್ನಿ ವಿದ್ಯಾವತಿ ಹಾಗೂ ಇನ್ನೊಬ್ಬ ಮಗಳು ಸುಮನ್ ಸ್ಥಿತಿ ಚಿಂತಾಜನಕವಾಗಿರೋದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಆರೋಪಿ ನಂದ್ ಕಿಶೋರ್, ಸಂಗಮ್ ವಿಹಾರ್ ಬಡವಾಣೆಯಲ್ಲಿ ದ್ವಿಚಕ್ರವಾಹನ ರಿಪೇರಿ ಅಂಗಡಿ ಇಟ್ಟುಕೊಂಡಿದ್ದು, ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿಗೆ ಮೂವರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳು ಇದ್ದು, ಒಬ್ಬ ಮಗಳ ಮದುವೆ ಆಗಿದೆ.

ಮಗಳ ಮದುವೆಗೆ ಹಣ ಹೊಂದಿಸುವಲ್ಲಿ ವಿಫಲನಾದ ನಂದ್ ಕಿಶೋರ್, ಈ ಕೃತ್ಯ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...