alex Certify
ಕನ್ನಡ ದುನಿಯಾ       Mobile App
       

Kannada Duniya

ರಾಮ್ದೇವ್ ಹೇಳಿಕೆಗೆ ಅಸಮಾಧಾನಗೊಂಡ ಉಮಾ ಭಾರತಿ

ಯೋಗ ಗುರು ಬಾಬಾ ರಾಮ್ದೇವ್ ಉಮಾ ಭಾರತಿ ಕೆಲಸವನ್ನು ಕೇಂದ್ರ ಸಚಿವ ಗಡ್ಕರಿಗೆ ಹೋಲಿಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಉಮಾ ಭಾರತಿ ಇದ್ರಿಂದ ಕೋಪಗೊಂಡಿದ್ದಾರೆ. ತಮ್ಮ ಅಸಮಾಧಾನವನ್ನು ಉಮಾ ಭಾರತಿ ಪತ್ರದ ಮೂಲಕ ತೋಡಿಕೊಂಡಿದ್ದಾರೆ. ಕೇಂದ್ರ ಸಚಿವೆ ಉಮಾ ಭಾರತಿ ಬಾಬಾ ರಾಮ್ದೇವ್ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಉಮಾ ಭಾರತಿ ಪತ್ರ ತಲುಪುತ್ತಿದ್ದಂತೆ ಬಾಬಾ ರಾಮ್ದೇವ್ ಟ್ವೀಟರ್ ನಲ್ಲಿ ಇದಕ್ಕೆ ಸಮಜಾಯಿಸಿ ನೀಡಿದ್ದಾರೆ. ಲಂಡನ್ ನಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬಾಬಾ ರಾಮ್ದೇವ್ ಉಮಾ ಭಾರತಿ ಕಚೇರಿಯಲ್ಲಿ ಫೈಲ್ ಗಳು ಮುಂದೆ ಹೋಗುವುದಿಲ್ಲ. ಗಡ್ಕರಿ ಕಚೇರಿಯಲ್ಲಿ ಫೈಲ್ ಗಳೇ ಇರೋದಿಲ್ಲ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಗಡ್ಕರಿ ಅತ್ಯುತ್ತಮವಾಗಿ ಕೆಲಸ ಮಾಡ್ತಾರೆ ಎಂದಿದ್ದರು. ಇದು ಉಮಾ ಭಾರತಿ ಅಸಮಾಧಾನಕ್ಕೆ ಕಾರಣವಾಗಿದೆ.

ನಿಮ್ಮ ಈ ಹೇಳಿಕೆ ನನ್ನ ಕೆಲಸಕ್ಕೆ ಹಾನಿಯಾಗುತ್ತದೆ ಎಂದು ಉಮಾ ಭಾರತಿ ಪತ್ರದಲ್ಲಿ ಹೇಳಿದ್ದರು. ಗಂಗಾ ಸ್ವಚ್ಛತೆ ವಿಚಾರದಲ್ಲಿ ಅಂತರಾಷ್ಟ್ರೀಯ ಚಾನೆಲ್ ಒಂದರ ಮುಂದೆ ಕುಳಿತು ನೀವು ನನ್ನ ಕೆಲಸವನ್ನು ಕೆಳಮಟ್ಟದಲ್ಲಿ ತೋರಿಸಿದ್ದೀರಿ ಎಂದು ಉಮಾ ಭಾರತಿ ವಿವರವಾಗಿ ಪತ್ರ ಬರೆದಿದ್ದರು. ಇದಕ್ಕೆ ಬಾಬಾ ರಾಮ್ದೇವ್ ಉತ್ತರ ನೀಡಿದ್ದಾರೆ. ನಿಮ್ಮ ಗೌರವಕ್ಕೆ ಧಕ್ಕೆ ತರುವ ಉದ್ದೇಶ ನನ್ನದಾಗಿರಲಿಲ್ಲ. ನಿಮ್ಮ ಗಂಗಾ-ನಿಷ್ಠೆ, ಧರ್ಮ-ನಿಷ್ಠೆ, ರಾಷ್ಟ್ರ-ನಿಷ್ಠೆ ಪ್ರಶಂಸನೀಯ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...