alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾದ ಮೂರೇ ದಿನಕ್ಕೆ ಕೈ ಕೊಟ್ಟ ಟೆಕ್ಕಿ

article-doc-1v2c8-6XxOeAZNyHSK2-323_634x445

ವೈವಾಹಿಕ ವೆಬ್ ಸೈಟ್ ನಲ್ಲಿ ಯುವತಿಯೊಬ್ಬಳನ್ನು ಮೆಚ್ಚಿ ಮನೆಯವರಿಗೂ ತಿಳಿಸದೆ ಆಕೆಯ ಕೈ ಹಿಡಿದಿದ್ದ ಯುನೈಟೆಡ್ ಕಿಂಗ್ಡಂ ನಲ್ಲಿ ಉದ್ಯೋಗದಲ್ಲಿರುವ ಟೆಕ್ಕಿಯೊಬ್ಬ ಮದುವೆಯಾದ ಮೂರೇ ದಿನಕ್ಕೆ ಆಕೆಯನ್ನು ತೊರೆದು ವಿದೇಶಕ್ಕೆ ಹಾರಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಾರಂಗಲ್ ನ 25 ವರ್ಷದ ಪ್ರಶಾಂತಿ ವಂಚನೆಗೊಳಗಾದವಳಾಗಿದ್ದು, ಹೈದರಾಬಾದ್ ನ ಎಲ್.ಬಿ. ನಗರ ನಿವಾಸಿ ಶ್ರವಣ್, ವೈವಾಹಿಕ ವೆಬ್ ಸೈಟ್ ನಲ್ಲಿ ಪರಿಚಯ ಮಾಡಿಕೊಂಡು ಮನೆಯವರಿಗೂ ತಿಳಿಸದೆ 2015 ರ ಆಗಸ್ಟ್ ನಲ್ಲಿ ಆಕೆಯನ್ನು ವಿವಾಹ ಮಾಡಿಕೊಂಡಿದ್ದ.

ವಿವಾಹದ ನಂತರ ಪ್ರಶಾಂತಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದು, ಈ ಸಂದರ್ಭದಲ್ಲಿ ಆತನ ಮನೆಯವರೂ ಸಂತೋಷದಿಂದಲೇ ಸ್ವಾಗತಿಸಿದ್ದಾರೆ. ಇದಾದ ಮೂರು ದಿನದ ಬಳಿಕ ಶ್ರವಣ್, ಪ್ರಶಾಂತಿಗೂ ತಿಳಿಸದೇ ವಾಪಾಸ್ ಯುಕೆ ಗೆ ತೆರಳಿದ್ದಾನೆ.

ಅಂದಿನಿಂದ ಪ್ರಶಾಂತಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿರುವ ಅತ್ತೆ- ಮಾವ ಸೇರಿದಂತೆ ಪತಿಯ ಸಂಬಂಧಿಗಳು ಈಗ ನಮ್ಮ ಮಗನಿಗೂ ನಿನಗೂ ಯಾವುದೇ ಸಂಬಂಧವಿಲ್ಲವೆಂದು ಆಕೆಯನ್ನು ಹೊರ ಹಾಕಿದ್ದಾರೆ. ಪ್ರಶಾಂತಿ ಈಗ ನ್ಯಾಯ ಕೋರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...