alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಸ್ಥಾನದ ಆವರಣದಲ್ಲಿ ಕೇಕ್ ಕತ್ತರಿಸಿದ ಮಹಿಳೆಯರಿಗೆ ಸಂಕಷ್ಟ

ಮದುವೆ ವಾರ್ಷಿಕೋತ್ಸವದ ಪ್ರಯುಕ್ತ ಉಜ್ಜಯನಿ ಮಹಾಕಾಳ ದೇವಸ್ಥಾನದ ಆವರಣದಲ್ಲಿ ಕೇಕ್ ಕತ್ತರಿಸಿದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ಇಬ್ಬರು ಮಹಿಳೆಯರು ಕೇಕ್ ಕತ್ತರಿಸಿ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದ ದೃಶ್ಯ ಸ್ಥಳೀಯ ಮಾಧ್ಯಮಗಳಲ್ಲಿ ಭಿತ್ತರವಾಗಿತ್ತು. ಇದನ್ನು ನೋಡಿ ತಕ್ಷಣವೇ ಅಲ್ಲಿಗೆ ದೌಡಾಯಿಸಿದ ಜಿಲ್ಲಾಧಿಕಾರಿ, ಇಬ್ಬರು ಮಹಿಳೆಯರಿಗೆ ವಕೀಲರ ಮೂಲಕ ಶೋಕಾಸ್ ನೋಟಿಸ್ ನೀಡಿ, ಮೇ 25 ರಂದು ಕೋರ್ಟ್ ಗೆ ಹಾಜರಾಗುವಂತೆ ತಿಳಿಸಿದ್ದಾರೆ.

ಅಲ್ಲದೆ, ಕೋರ್ಟ್ ಗೆ ಬರುವುದಕ್ಕೂ ಮೊದಲು 1 ಲಕ್ಷ ರೂ. ವೈಯಕ್ತಿಕ ಬಾಂಡ್ ನೀಡುವಂತೆ ತಿಳಿಸಲಾಗಿದೆ. ಹಾಗೆಯೇ ಒಂದು ತಿಂಗಳು ದೇವಾಲಯಕ್ಕೆ ಪ್ರವೇಶಿಸದಂತೆ ಈ ಮಹಿಳೆಯರಿಗೆ ನಿರ್ಬಂಧ ಹೇರಲಾಗಿದೆ. ಇದೇ ವೇಳೆ ಈ ಇಬ್ಬರು ಮಹಿಳೆಯರಿಗೆ ಸಹಕರಿಸಿದ ಹೋಮ್ ಗಾರ್ಡ್ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಡಳಿತ ತಿಳಿಸಿದೆ.

ನಂದಿನಿ ಜೋಶಿ ಮತ್ತು ಸಾಧನಾ ಉಪಾಧ್ಯಾಯ ಇಬ್ಬರೂ ಉಜ್ಜಯನಿ ನಿವಾಸಿಗಳು, ಮೇ 7 ರಂದು ಇವರು ಮಹಾಕಾಳ ದೇವಸ್ಥಾನದ ಗರ್ಭಗುಡಿ ಪಕ್ಕದಲ್ಲಿರುವ ನಂದಿ ಹಾಲ್ ನಲ್ಲಿ ಕೇಕ್ ಕತ್ತರಿಸಿ ನಂತರ ಮದುವೆ ವಾರ್ಷಿಕೋತ್ಸವ ಆಚರಿಸುತ್ತಿದ್ರು.

ಇತ್ತ ತಮಗೆ ಶೋಕಾಸ್ ನೋಟಿಸ್ ನೀಡಿದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನಂದಿನಿ ಜೋಶಿ, ದೇವಸ್ಥಾನದ ಆವರಣಲ್ಲಿ ಕೇಕ್ ಕತ್ತರಿಸಬಾರದು ಅಂತಾ ಯಾವ ಗ್ರಂಥದಲ್ಲಿದೆ. ಅಷ್ಟಕ್ಕೂ ನಾನು ಮೊಟ್ಟೆಯಿಲ್ಲದ ಕೇಕ್ ತಯಾರಿಸಿ ತಂದು, ಗರ್ಭಗುಡಿಯಿಂದ ದೂರವಿರುವ ಹಾಲ್ ನಲ್ಲಿ ಕೇಕ್ ಕತ್ತರಿಸಿದ್ದೇನೆ ಅಂತಾ ಸಮರ್ಥಿಸಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...