alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಾಲಯಕ್ಕೆ ನಾಯಿಮರಿಯನ್ನು ಕರೆದೊಯ್ದ ಯುವತಿ

ಹೊಸ ವರ್ಷದ ದಿನದಂದು ಉಜ್ಜನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಯುವತಿಯೊಬ್ಬಳು ತನ್ನ ನಾಯಿಮರಿಯನ್ನು ಕರೆದೊಯ್ದ ವಿಚಾರ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆಯೇ ಉಜ್ಜನಿಯ ಜಿಲ್ಲಾಧಿಕಾರಿ ಈ ಕುರಿತು ವಿವರಣೆ ನೀಡುವಂತೆ ದೇವಾಲಯದ ಆಡಳಿತ ಮಂಡಳಿಗೆ ನೋಟೀಸ್ ನೀಡಿದ್ದಾರೆ.

ಸೋಮವಾರದಂದು ಇಂದೋರ್ ಮೂಲದ ಯುವತಿ ರಾಧಿಕ ಕಠಾರಿಯಾ ಎಂಬಾಕೆ ಮೂರು ಹಂತದ ಸೆಕ್ಯೂರಿಟಿಯನ್ನು ದಾಟಿ ತನ್ನ ನಾಯಿಮರಿಯೊಂದಿಗೆ ದೇವಾಲಯವನ್ನು ಪ್ರವೇಶಿಸಿದ್ದಳು. ಇದನ್ನು ಕಂಡ ಮಾಧ್ಯಮ ಮಂದಿ ಆಕೆಯನ್ನು ಪ್ರಶ್ನಿಸಿದಾಗ ಗಲಿಬಿಲಿಗೊಂಡ ಯುವತಿ ದೇವಾಲಯದ ಪ್ರಾಂಗಣದಿಂದ ಇದನ್ನು ಎತ್ತಿಕೊಂಡು ಬಂದಿದ್ದಾಗಿ ಸುಳ್ಳು ಹೇಳಿದ್ದಳು.

ರಾಧಿಕ ಕಠಾರಿಯಾ ನಾಯಿ ಮರಿಯೊಂದಿಗೆ ದೇವಾಲಯ ಪ್ರವೇಶಿಸುತ್ತಿದ್ದ ವಿಚಾರ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆ ಉಜ್ಜಯನಿ ಜಿಲ್ಲಾಧಿಕಾರಿ ಸಂಕೇತ್ ಬೊಂಡ್ವೆ, ಮಹಾಕಾಳೇಶ್ವರ ದೇವಾಲಯದ ಆಡಳಿತಾಧಿಕಾರಿ ಅವದೀಶ್ ಶರ್ಮಾರವರಿಗೆ ನೋಟೀಸ್ ಜಾರಿ ಮಾಡಿದ್ದು, ವಿವರಣೆ ನೀಡುವಂತೆ ಆದೇಶಿಸಿದ್ದಾರೆ. ದೇವಾಲಯದಲ್ಲಿ ಮೂರು ಹಂತದ ಸೆಕ್ಯೂರಿಟಿ ಇದ್ದು, ಇದರ ನಡುವೆಯೂ ಯುವತಿ ನಾಯಿ ಮರಿಯೊಂದಿಗೆ ಪ್ರವೇಶಿಸಿದ್ದು ಹೇಗೆ ಎಂಬ ಪ್ರಶ್ನೆ ಈಗ ಮೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...