alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಕಾರಣಕ್ಕೆ ಪಡಿತರ ನಿರಾಕರಿಸುವಂತಿಲ್ಲ

ನವದೆಹಲಿ: ಜಾರ್ಖಂಡ್ ನಲ್ಲಿ ಆಧಾರ್ ಇಲ್ಲದ ಕಾರಣಕ್ಕೆ 11 ವರ್ಷದ ಬಾಲಕಿ ಮೃತಪಟ್ಟಿದ್ದಾಗಿ ಭಾರೀ ಸುದ್ದಿಯಾದ ಹಿನ್ನಲೆಯಲ್ಲಿ ಆಧಾರ್ ವಿಶಿಷ್ಟ ಗುರುತು ಪ್ರಾಧಿಕಾರ(UIDAI) ಕ್ರಮ ಕೈಗೊಂಡಿದೆ.

ಆಧಾರ್ ಇಲ್ಲದ ಕಾರಣಕ್ಕೆ ಯಾರೊಬ್ಬರಿಗೂ ಪಡಿತರವನ್ನು ನಿರಾಕರಿಸುವಂತಿಲ್ಲ. ಎಲ್ಲಾ ಅರ್ಹರಿಗೂ ಪಡಿತರ ಸೌಲಭ್ಯ ಕಲ್ಪಿಸಬೇಕೆಂದು ಸೂಚಿಸಲಾಗಿದೆ.

ಆಧಾರ್ ಲಿಂಕ್ ಮಾಡದ ಕಾರಣ ಪಡಿತರ ಚೀಟಿ ರದ್ದಾಗಿ ಜಾರ್ಖಂಡ್ ನಲ್ಲಿ ಬಡ ಕುಟುಂಬವೊಂದಕ್ಕೆ ಪಡಿತರ ಸಿಕ್ಕಿರಲಿಲ್ಲ. ಹಸಿವಿನಿಂದ ಕುಟುಂಬದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿತ್ತು. ಇದಕ್ಕೆ ತೀವ್ರ ಆಕ್ರೋಶ ಕೂಡ ವ್ಯಕ್ತವಾಗಿತ್ತು.

UIDAI ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೂಷಣ್ ಪಾಂಡೆ, ಘಟನೆಯನ್ನು ದುರದೃಷ್ಟಕರ ಎಂದು ಹೇಳಿದ್ದು, ಆಧಾರ್ ಕಾರಣಕ್ಕೆ ರೇಷನ್ ನಿರಾಕರಿಸಿದ್ದು ಸರಿಯಲ್ಲ. ಆಧಾರ್ ಆಕ್ಟ್ ಇನ್ನೂ ಸಂಪೂರ್ಣ ಸ್ಪಷ್ಟವಾಗಿಲ್ಲ. ಎಲ್ಲಾ ಅರ್ಹರಿಗೂ ರೇಷನ್ ಸೇರಿ ಅಗತ್ಯ ಸೌಲಭ್ಯ ನೀಡಬೇಕಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...