alex Certify
ಕನ್ನಡ ದುನಿಯಾ       Mobile App
       

Kannada Duniya

ಲಿವ್ ಇನ್ ನಂತ್ರ ಒಂದೇ ಮಂಟಪದಲ್ಲಿ ಮೂವರಿಗೆ ತಾಳಿ ಕಟ್ಟಿದ ವರ…!

ರಾಜಸ್ತಾನದ ಉದಯ್ಪುರದಲ್ಲಿ ಅನನ್ಯ ಮದುವೆಯೊಂದು ನಡೆದಿದೆ. ಒಂದು ಮಂಟಪ. ಒಬ್ಬ ವರ. ಆದ್ರೆ ಮೂವರು ವಧು. ಒಬ್ಬ ಸಂಗಾತಿ ಜೊತೆ ಕೆಲ ವರ್ಷ ಲಿವ್ ಇನ್ ನಲ್ಲಿದ್ದು ನಂತ್ರ ಮದುವೆಯಾಗುವ ಸುದ್ದಿಯನ್ನು ನೀವು ಕೇಳಿರುತ್ತೀರಾ. ಈಗ ಲಿವ್ ಇನ್ ನಂತ್ರ ಮದುವೆ ಸಾಮಾನ್ಯ ಸಂಗತಿ ಕೂಡ. ಆದ್ರೆ ಒಂದಲ್ಲ, ಎರಡಲ್ಲ ಮೂರು ಹುಡುಗಿಯರ ಜೊತೆ ಲಿವ್ ಇನ್ ನಲ್ಲಿದ್ದ ಹುಡುಗನೊಬ್ಬ ಒಂದೇ ಮಂಟಪದಲ್ಲಿ ಮೂವರನ್ನೂ ಮದುವೆಯಾಗಿದ್ದಾನೆ.

ದಕ್ಷಿಣ ರಾಜಸ್ತಾನದ ಬಹ್ಲುಲಿಯಾ ಪ್ರದೇಶದಲ್ಲಿ ವಾಸವಾಗಿರುವ ಬುಡಕಟ್ಟು ಜನರಲ್ಲಿ ಲಿವ್ ಇನ್ ರಿಲೇಷನ್ಶಿಪ್ ಪದ್ಧತಿಯಿದೆ. ನೂರಾರು ವರ್ಷಗಳಿಂದ ಈ ಪದ್ಧತಿ ಜಾರಿಯಲ್ಲಿದೆ. 32 ವರ್ಷದ ದಿವ್ಯಾಂಗ ನಕ್ಕಾಲಾಲ್ ಕಸೌಟಿಯಾ ಮೂರು ಹುಡುಗಿಯರನ್ನು ಒಂದೇ ಬಾರಿ ಮದುವೆಯಾಗಿದ್ದಾನೆ.

ಮೊದಲ ಪತ್ನಿ ಜೊತೆ 12 ವರ್ಷ, ಎರಡನೇ ಪತ್ನಿ ಜೊತೆ 8 ವರ್ಷ ಹಾಗೂ ಮೂರನೇ ಪತ್ನಿ (ಮೊದಲ ಪತ್ನಿ ಸಹೋದರಿ) ಜೊತೆ 1 ವರ್ಷ ನಕ್ಕಾಲಾಲ್ ಲಿವ್ ಇನ್ ನಲ್ಲಿದ್ದನಂತೆ. ಮೊದಲ ಪತ್ನಿ ನಕ್ಕಾಲಾಲ್ ಗಿಂತ 13 ವರ್ಷ ದೊಡ್ಡವಳು. ಆಕೆ ಜೊತೆ ಲಿವ್ ಇನ್ ನಲ್ಲಿದ್ದ ನಕ್ಕಾಲಾಲ್ ಪಕ್ಕದೂರಿನ ದಿವ್ಯಾಂಗ ಮಹಿಳೆ ಪ್ರೀತಿಗೆ ಬಿದ್ದ. ಆಕೆಯನ್ನೂ ಮನೆಗೆ ಕರೆದುಕೊಂಡು ಬಂದ. ಇಬ್ಬರಿಗೂ ಸಂತಾನ ಭಾಗ್ಯ ಸಿಗಲಿಲ್ಲ. ಹಾಗಾಗಿ ಒಂದು ವರ್ಷದ ಹಿಂದೆ 5 ವರ್ಷ ಚಿಕ್ಕವಳಿರುವ ಮೊದಲನೇ ಪತ್ನಿ ಸಹೋದರಿಯನ್ನು ಮನೆಗೆ ಕರೆದುಕೊಂಡು ಬಂದ. ಆಕೆ ಗರ್ಭಿಣಿಯಾದ್ಮೇಲೆ ಮೂವರನ್ನೂ ಮದುವೆಯಾಗಲು ನಿರ್ಧರಿಸಿದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...