alex Certify
ಕನ್ನಡ ದುನಿಯಾ       Mobile App
       

Kannada Duniya

199 ಕಿ.ಮೀ ವೇಗದಲ್ಲಿ ಬೈಕ್ ಚಲಾಯಿಸ್ತಿದ್ದವರಿಗೆ ದುಬಾರಿಯಾಯ್ತು ಫೇಸ್ಬುಕ್ ಲೈವ್

ಫೇಸ್ಬುಕ್ ಲೈವ್ ಹುಚ್ಚು ಅನೇಕರ ಪ್ರಾಣಕ್ಕೆ ಕುತ್ತು ತರ್ತಿದೆ. ಛತ್ತೀಸ್ಗಢದ ಕಾಂಕರ್ ಜಿಲ್ಲೆಯಲ್ಲಿ ಇಂಥಹದ್ದೇ ಘಟನೆ ಬೆಳಕಿಗೆ ಬಂದಿದೆ. ಮೋಟರ್ ಸೈಕಲ್ ನಲ್ಲಿ ಪ್ರಯಾಣ ಮಾಡ್ತಿದ್ದ ಇಬ್ಬರು ಯುವಕರಿಗೆ ಫೇಸ್ಬುಕ್ ಲೈವ್ ದುಬಾರಿಯಾಗಿ ಪರಿಗಣಿಸಿದೆ.

ಯುವಕರು 199 ಕಿಲೋಮೀಟರ್ ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದರು. ಇದನ್ನು ಫೇಸ್ಬುಕ್ ನಲ್ಲಿ ಲೈವ್ ಪ್ರಸಾರ ಮಾಡ್ತಿದ್ದರು. ಗಮನ ಫೇಸ್ಬುಕ್ ಮೇಲೆ ಹೋಗಿದ್ದರಿಂದ ಮುಂದೆ ಬರ್ತಿದ್ದ ಬಸ್ ಗೆ ಬೈಕ್ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿಯೇ ಒಬ್ಬ ಸಾವನ್ನಪ್ಪಿದ್ರೆ ಇನ್ನೊಬ್ಬ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಛತ್ತೀಸ್ಗಢದ ಬಸ್ತರ್ ನಿವಾಸಿಗಳು. ಮನೀಶ್ ಕುಮಾರ್ ಬೈಕ್ ಚಲಾಯಿಸುತ್ತಿದ್ದರೆ ಮುರಳಿ ಬೈಕ್ ಸ್ಟಂಟ್ ನ ವಿಡಿಯೋವನ್ನು ಫೇಸ್ಬುಕ್ ನಲ್ಲಿ ಲೈವ್ ನೀಡ್ತಿದ್ದ. ಫೇಸ್ಬುಕ್ ನಲ್ಲಿ ಬರ್ತಿದ್ದ ಕಮೆಂಟ್ ನೋಡಿ ಖುಷಿಯಾಗ್ತಿದ್ದ ಯುವಕರು ಇದ್ರಿಂದ ಬೈಕ್ ವೇಗವನ್ನು ಮತ್ತಷ್ಟು ಹೆಚ್ಚಿಸಿದ್ದರು. ಬೈಕ್ ಸವಾರರನ್ನು ರಕ್ಷಿಸಲು ಬಸ್ ಚಾಲಕ ಬ್ರೇಕ್ ಹಾಕಿದ್ದಾನೆ. ಬಸ್ ನಲ್ಲಿದ್ದ 38 ಪ್ರಯಾಣಿಕರಲ್ಲಿ 13 ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...