alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಲಿಪ್ ಕಾರ್ಟ್, ಅಮೆಜಾನ್ ಗೆ ವಂಚಿಸಿದ್ದ ವಿದ್ಯಾರ್ಥಿಗಳ ಅರೆಸ್ಟ್

building-bengaluru-flipkart

ಆನ್ ಲೈನ್ ಮಾರ್ಕೆಟಿಂಗ್ ಸಂಸ್ಥೆಗಳಾದ ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ನಲ್ಲಿ ಬೆಲೆ ಬಾಳುವ ಐ ಫೋನ್, ಲ್ಯಾಪ್ ಟಾಪ್ ಹಾಗೂ ಕ್ಯಾಮೆರಾ ಬುಕ್ ಮಾಡಿ ಬಳಿಕ ವಂಚಿಸುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದಿನ ಸೈಕಾಲಜಿ ವಿದ್ಯಾರ್ಥಿ 19 ವರ್ಷದ ಯಾಹ್ಯಾ ಮಹಮ್ಮದ್ ಇಶಾಕ್ ಹಾಗೂ ಆತನ ಸಂಬಂಧಿ ಬಿಬಿಎ ವಿದ್ಯಾರ್ಥಿ 24 ವರ್ಷದ ಮಹಮ್ಮದ್ ಅನ್ಸಾರಿ ಬಂಧಿತರಾದವರಾಗಿದ್ದು, ಇವರುಗಳಿಂದ ನೆಕ್ಸಸ್ 6 ಪಿ ಗೋಲ್ಡ್ ಮೊಬೈಲ್, ಮೈಕ್ರೋಸಾಫ್ಟ್ ಮೊಬೈಲ್ ಫೋನ್, ಸ್ಯಾಮ್ಸಂಗ್ 6 ಎಸ್ ಎಡ್ಜ್ ಫೋನ್, ನಿಕಾನ್ ಡಿಜಿಟಲ್ ಕ್ಯಾಮೆರಾ ಹಾಗೂ ಲೆನೋವಾ ಲ್ಯಾಪ್ ಟಾಪ್ ವಶಕ್ಕೆ ಪಡೆಯಲಾಗಿದೆ.

ಯಾಹ್ಯಾ ಇ ಮಾರ್ಕೆಂಟಿಗ್ ಸಂಸ್ಥೆಗಳ ಪ್ಯಾಕಿಂಗ್ ಕುರಿತ ಮಾಹಿತಿ ಹೊಂದಿದ್ದು, ಬೆಲೆ ಬಾಳುವ ವಸ್ತುಗಳನ್ನು ಇವರುಗಳು ಬುಕ್ ಮಾಡುತ್ತಿದ್ದರು. ಪಾರ್ಸೆಲ್ ಬಂದ ವೇಳೆ ಅದನ್ನು ಪಡೆದ ಯಾಹ್ಯಾ ಒಳ ಹೋದರೆ ಅನ್ಸಾರಿ ಡೆಲಿವರಿ ಬಾಯ್ ಮಾತನಾಡಿಸುತ್ತಾ ಹೊರಗೆ ನಿಲ್ಲುತ್ತಿದ್ದ. ಯಾಹ್ಯಾ ಆ ಪಾರ್ಸೆಲ್ ಓಪನ್ ಮಾಡಿ ಅದರಲ್ಲಿದ್ದ ವಸ್ತುವನ್ನು ತೆಗೆದುಕೊಂಡು ಮರಳನ್ನು ತುಂಬಿ ಮತ್ತೆ ನೀಟಾಗಿ ಪ್ಯಾಕ್ ಮಾಡುತ್ತಿದ್ದ ಎನ್ನಲಾಗಿದೆ. ಬಳಿಕ ಹಣ ಪಾವತಿಸಲು ಡೆಬಿಟ್ ಕಾರ್ಡ್ ನೀಡುತ್ತಿದ್ದು, ಸ್ವೈಪ್ ಮಾಡಿದ ವೇಳೆ ಹಣ ಪಾವತಿಯಾಗುತ್ತಿರಲಿಲ್ಲ, ಬಳಿಕ ಆ ಪಾರ್ಸೆಲ್ ಅನ್ನು ಹಿಂದಿರುಗಿಸುತ್ತಿದ್ದರೆನ್ನಲಾಗಿದೆ. ಕುರಿತು ದೂರು ದಾಖಲಾದ ಬಳಿಕ ಇಬ್ಬರೂ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...