alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ: ಪ್ರಾಣ ತೆಗೆಯಬಹುದು ಹಸಿಮೆಣಸು

chilli

ಹಸಿ ಮೆಣಸು ತಿಂದ್ರೆ ಪ್ರಾಣ ಹೋಗುತ್ತೆ? ಏನ್ ಹೇಳ್ತಿದ್ದೀರಾ ಅಂತಾ ಕೇಳಬೇಡಿ. ಇದು ನಿಜ. ಹಸಿಮೆಣಸು ತಿಂದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಘಟನೆ ನಡೆದಿರುವುದು ದೆಹಲಿಯಲ್ಲಿ. ಎರಡು ವರ್ಷದ ಬಾಲಕಿ ಆಟವಾಡ್ತಾ ಹಸಿಮೆಣಸಿನ ಕಾಯಿ ತಿಂದಿದ್ದಾಳೆ. ಇದರ ಪರಿಣಾಮ ಉಸಿರಾಡಲು ಸಾಧ್ಯವಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.

ಏಮ್ಸ್ ಆಸ್ಪತ್ರೆಯಲ್ಲಿ ನಡೆದ ಶವಪರೀಕ್ಷೆ ವೇಳೆ ಈ ವಿಷಯ ಹೊರಬಂದಿದೆ. ಬಾಲಕಿ ಮೆಣಸಿನ ಕಾಯಿ ತಿಂದ ನಂತರ ಅನೇಕ ಬಾರಿ ವಾಂತಿ ಮಾಡಿಕೊಂಡಿದ್ದಾಳೆ. ಇದರಿಂದಾಗಿ ಮೆಣಸಿನಕಾಯಿಯಲ್ಲಿದ್ದ ಗ್ಯಾಸ್ಟ್ರಿಕ್ ದ್ರವ ಶ್ವಾಸನಾಳಕ್ಕೆ ಸೇರಿದೆ. ಸ್ಥಳೀಯ ಆಸ್ಪತ್ರೆ ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ್ದಾರೆ. ಇದರಿಂದಾಗಿ ಬಾಲಕಿಯ ಆರೋಗ್ಯ ಸುಧಾರಿಸಿತ್ತು. ಆದ್ರೆ 24 ಗಂಟೆ ಪರಿಶೀಲನೆಗೆ ಇಡಲಾಗಿತ್ತು. ಆಗ ಆಕೆ ಸಾವನ್ನಪ್ಪಿದ್ದಾಳೆ.

ಹಸಿಮೆಣಸನ್ನು ತಿಂದು ಸಾವನ್ನಪ್ಪಿರುವ ಪ್ರಕರಣ ಇದೇ ಮೊದಲನೆಯದಾಗಿದೆ. ಶವಪರೀಕ್ಷೆ ನಡೆಸಿದ ವೈದ್ಯರ ಪ್ರಕಾರ ಗ್ಯಾಸ್ಟ್ರಿಕ್ ದ್ರವ ಶ್ವಾಸನಾಳಕ್ಕೆ ಸೇರಿದಾಗ ಸಮಸ್ಯೆಯಾಗುತ್ತದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...