alex Certify
ಕನ್ನಡ ದುನಿಯಾ       Mobile App
       

Kannada Duniya

ಹಳಿ ದಾಟುವ ವೇಳೆ ರೈಲು ಢಿಕ್ಕಿ: ಇಬ್ಬರು ಮಹಿಳೆಯರ ಸಾವು

ರೈಲು ಹಳಿ ದಾಟುವ ವೇಳೆ ಇಬ್ಬರು ಮಹಿಳೆಯರು ವೇಗದ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಆಗಸ್ಟ್ 18ರಂದು ಈ ಘಟನೆ ನಡೆದಿದ್ದು, ಮೃತರಿಬ್ಬರು ಕೃಷ್ಣಾನಗರ್ ನಲ್ಲಿ ವಾಸವಿದ್ದವರು ಅಂತ ಹೇಳಲಾಗ್ತಿದೆ.

ಫ್ಲಾಟ್ಫಾರ್ಮ್ ಮೇಲೆ ನಡೆಯುತ್ತಿದ್ದ ಇಬ್ಬರು ಮಹಿಳೆಯರು ರೈಲು ಹಳಿಗಳನ್ನ ದಾಟಿ ಮತ್ತೊಂದು ಕಡೆಗೆ ತೆರಳುವ ಅವಸರದಲ್ಲಿದ್ದರು. ಈ ವೇಳೆ ವೇಗವಾಗಿ ಬಂದ ರೈಲು ಇಬ್ಬರಿಗೂ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತರಾಗಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ರೈಲ್ವೆ ಪೊಲೀಸರು ಇಬ್ಬರು ಮಹಿಳೆಯರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಆನಂತರದಲ್ಲಿ ಮೃತರ ಸಂಬಂಧಿಕರಿಗೆ ಹಸ್ತಾಂತರ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...