alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ಯಾಂಕರ್ ಪಲ್ಟಿಯಾಗಿದ್ದಕ್ಕೆ ಇಡೀ ಗ್ರಾಮವೇ ಖಾಲಿ

ಅಮೋನಿಯಾ ತುಂಬಿಕೊಂಡು ತೆರಳುತ್ತಿದ್ದ ಟ್ಯಾಂಕರ್ ಒಂದು ಪಲ್ಟಿಯಾದ ಪರಿಣಾಮ ಗ್ಯಾಸ್ ಲೀಕ್  ಆಗತೊಡಗಿದ್ದು, ಇದರಿಂದಾಗಿ ಸಮೀಪದ ಗ್ರಾಮದಲ್ಲಿನ ಗ್ರಾಮಸ್ಥರನ್ನು ತೆರವುಗೊಳಿಸಲಾಗಿದೆ.

ಶುಕ್ರವಾರ ಬೆಳಗಿನ ಜಾವ 2.45 ರ ಸುಮಾರಿಗೆ ಈ ಘಟನೆ ಗೋವಾದ ವಾಸ್ಕೊ ನಗರ ಮತ್ತು ಪಣಜಿ ನಡುವಿನ ಚಿಕಲಿಂ ಗ್ರಾಮದ ಬಳಿ ನಡೆದಿದ್ದು, ಟ್ಯಾಂಕರ್ ನಲ್ಲಿದ್ದ ಅಮೋನಿಯ ಗ್ಯಾಸ್ ಸೋರಿಕೆಯಾಗತೊಡಗಿದ ಕಾರಣ ಗ್ರಾಮದ 300 ಮನೆಗಳಲ್ಲಿದ್ದ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಅಪಘಾತ ಸಂಭವಿಸಿದ ಸ್ಥಳದ ಸಮೀಪದಲ್ಲಿದ್ದ ಮನೆಯ ಇಬ್ಬರು ಮಹಿಳೆಯರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿದ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹೈವೇಯಲ್ಲಿನ ವಾಹನ ಸಂಚಾರವನ್ನು ನಿಲ್ಲಿಸಲಾಗಿದ್ದು, ಸನಿಹದ ನಿವಾಸಿಗಳು ಮುಖಕ್ಕೆ ಮಾಸ್ಕ್ ಧರಿಸಬೇಕೆಂದು ಸೂಚನೆ ನೀಡಲಾಗಿದೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...