alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಿಲಾಡಿ ಯುವತಿಯರ ಕಥೆ ಕೇಳಿದ್ರೆ ಶಾಕ್ ಆಗ್ತೀರಾ…!

ನವದೆಹಲಿ: ತಮಗೆ ಸಹಾಯ ಮಾಡುವಂತೆ ಕೇಳುವ ನೆಪದಲ್ಲಿ ಪುರುಷರನ್ನು ಲೂಟಿ ಮಾಡುತ್ತಿದ್ದ ಇಬ್ಬರು ಯುವತಿಯರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.‌ ಅಚ್ಚರಿ ಎಂದರೆ ಆ ಇಬ್ಬರು ಯುವತಿಯರು ಕಳೆದ ಎರಡು ತಿಂಗಳಲ್ಲಿ 56 ಮಂದಿಯನ್ನು ದೋಚಿರುವ ಪ್ರಕರಣ ಸಹ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಸ್ವೀಟಿ (24) ಮತ್ತು ಮುಸ್ಕಾನ್ (25) ಬಂಧಿತರು. ಈ ಕಿಲಾಡಿ ಜೋಡಿ ಮದುವೆ ಮನೆಗಳಿಗೆ ತೆರಳಿ ಅಲ್ಲಿಂದ ಸಹ ದೋಚಿತ್ತು. ಮೆಟ್ರೋ ನಿಲ್ದಾಣದಲ್ಲಿ ಪುರುಷನೊಬ್ಬ ಇಬ್ಬರು ಮಹಿಳೆಯರನ್ನು ಹಿಡಿಯಲು ಓಡುತ್ತಿದ್ದುದನ್ನು ಗಮನಿಸಿದ ಪೊಲೀಸರು ಚೇಸಿಂಗ್ ಮಾಡಿ ಅವರಿಬ್ಬರನ್ನು ಹಿಡಿದಾಗ ಹಳೆಯ ಪ್ರಕರಣಗಳು ಬೆಳಕಿಗೆ ಬಂದಿತು.

ಈ ಜೋಡಿ ಅನಕ್ಷರಸ್ಥರಾಗಿದ್ದು, ಜೀವನೋಪಾಯಕ್ಕಾಗಿ ರಾತ್ರಿ ಸಮಯದಲ್ಲಿ ಪುರುಷರನ್ನು ಆಕರ್ಷಿಸಿ ಸಹಾಯ ಕೇಳುವ ನೆಪದಲ್ಲಿ ದೋಚುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...