alex Certify
ಕನ್ನಡ ದುನಿಯಾ       Mobile App
       

Kannada Duniya

ಇವರಿಬ್ಬರ ಪ್ಲಾನ್ ನೋಡಿ ಪೊಲೀಸರೇ ಸುಸ್ತಾಗಿದ್ದಾರೆ !

ATM 448ಎಟಿಎಂ ನಿಂದ ಹಣ ಎಗರಿಸಲು ಇಬ್ಬರು ಟ್ರಕ್ ಚಾಲಕರು ಮಾಡುತ್ತಿದ್ದ ಪ್ಲಾನ್ ಕಂಡು ಪೊಲೀಸರೇ ಸುಸ್ತಾಗಿದ್ದಾರೆ. 20 ವರ್ಷ ವಯೋಮಾನದ ಈ ಯುವಕರು ಇದೇ ಪ್ಲಾನ್ ಬಳಸಿ ಇನ್ನೂ ಹಲವಾರು ಕಡೆಯಿಂದ ಹಣ ಎಗರಿಸಿರಬಹುದೆಂಬ ಶಂಕೆಯ ಮೇಲೆ ಅವರಿಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಹರಿಯಾಣ ಮೂಲದ ಅಕ್ರಮ್ ಮಹಮ್ಮದ್ ಆಲಿಖಾನ್ ಹಾಗೂ ಅಸ್ಗರ್ ಮಹ್ಮದ್ ರನ್ನು ಪುಣೆಯ ಪಿಂಪ್ರಿ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 70 ಸಾವಿರ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಟ್ರಕ್ ಚಾಲಕರಾಗಿದ್ದರೂ ಎಟಿಎಂ ಯಂತ್ರಗಳ ಕುರಿತ ತಾಂತ್ರಿಕ ಮಾಹಿತಿ ಹೊಂದಿದ್ದ ಇವರುಗಳು, ಇದೇ ತಂತ್ರ ಬಳಸಿ ಹಣ ಲಪಟಾಯಿಸುತ್ತಿದ್ದರೆನ್ನಲಾಗಿದೆ.

ಎಟಿಎಂ ಯಂತ್ರವನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸುವ ತಂತ್ರ ಅರಿತಿದ್ದ ಇವರುಗಳು, ಆ ರೀತಿ ಮಾಡಿ ಅಲ್ಲಿಯೇ ಕಾದು ನಿಲ್ಲುತ್ತಿದ್ದರು. ಯಾರಾದರೂ ಬಂದು ಹಣ ತೆಗೆಯಲು ತಮ್ಮ ಕಾರ್ಡ್ ಹಾಕಿ ಪಿನ್ ನಂಬರ್ ಒತ್ತಿದ ಬಳಿಕ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುತ್ತಿದ್ದ ಎಟಿಎಂ ನಿಂದ ಹಣ ಬರುತ್ತಿರಲಿಲ್ಲ. ಅವರು ಅಲ್ಲಿಂದ ತೆರಳಿದ ಬಳಿಕ ಎಟಿಎಂ ಯಂತ್ರವನ್ನು ಪುನಃ ಸಕ್ರಿಯಗೊಳಿಸಿ ಆ ಗ್ರಾಹಕರು ನೀಡಿದ್ದ ವಿವರದ ಆಧಾರದ ಮೇಲೆ ಹಣ ಲಪಟಾಯಿಸುತ್ತಿದ್ದರು. ಹೀಗೆ ಮಾಡಲು ಹೋದ ವೇಳೆ ವ್ಯಕ್ತಿಯೊಬ್ಬರಿಗೆ ತಮ್ಮ ಖಾತೆಯಿಂದ 5 ಸಾವಿರ ಹಣ ಡ್ರಾ ಮಾಡಿರುವುದು ಫೋನ್ ಸಂದೇಶದ ಮೂಲಕ ಗೊತ್ತಾಗಿದೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದು, ಇದೀಗ ಈ ಇಬ್ಬರನ್ನೂ ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...