alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಾಲಯದಲ್ಲೇ ಸಾಧುಗಳಿಬ್ಬರ ಬಿಗ್ ಫೈಟ್…!

ಸಾಧುಗಳಿಬ್ಬರು ದೇವಾಲಯದಲ್ಲೇ ಹೊಡೆದಾಡಿಕೊಂಡ ಘಟನೆ ಉತ್ತರ ಪ್ರದೇಶದ ಮಥುರಾದ ಬರ್ಸಾನಾದಲ್ಲಿರುವ ಪ್ರಸಿದ್ದ ರಾಧಾ ರಾಣಿ ದೇವಾಲಯದಲ್ಲಿ ನಡೆದಿದೆ.

ದೇವಾಲಯದಲ್ಲಿ ವಿಶೇಷ ಉತ್ಸವ ನಡೆಯುತ್ತಿರುವ ಸಂದರ್ಭದಲ್ಲೇ ಸಾಧು ಬಾಲಕ್ ದಾಸ್ ಹಾಗೂ ಸಂಜಯ್ ಬಾಬಾ ಹೊಡೆದಾಡಿಕೊಂಡಿದ್ದು, ಈ ದೃಶ್ಯ ದೇವಾಲಯದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಮಹಿಳೆಯೊಬ್ಬರು ಜಗಳ ಬಿಡಿಸಲು ಮುಂದಾಗಿದ್ದು, ಇದಕ್ಕೆ ಜಗ್ಗದೆ ಕೋಲಿನಿಂದ ಪರಸ್ಪರ ಥಳಿಸಿಕೊಂಡಿದ್ದಾರೆ. ಇಬ್ಬರ ನಡುವಿನ ಕಲಹಕ್ಕೆ ಕಾರಣವೇನೆಂಬುದು ಬಹಿರಂಗವಾಗಿಲ್ಲವಾದರೂ ಸಿಸಿ ಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...