alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ಕಳ್ಳತನ ಆರೋಪ: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನು ಹೊಡೆದು ಕೊಂದ್ರು

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಕ್ಕಳ ಕಳ್ಳತನದ ವಿಡಿಯೋ ಈವರೆಗೆ ಅನೇಕ ಅಮಾಯಕರನ್ನು ಬಲಿ ಪಡೆದಿದೆ. ಮಕ್ಕಳ ಕಳ್ಳತನದ ಅನುಮಾನದ ಮೇರೆಗೆ ಸಾರ್ವಜನಿಕರು ಅಮಾಯಕರಿಗೆ ಒದೆ ನೀಡ್ತಿದ್ದಾರೆ. ಬೆಂಗಳೂರು, ಗುಜರಾತ್ ನಂತ್ರ ಘಟನೆ ತ್ರಿಪುರಾಕ್ಕೆ ತಲುಪಿದೆ. ಗುರುವಾರ ತ್ರಿಪುರಾದಲ್ಲಿ ಎರಡು ಪ್ರತ್ಯೇಕ ಘಟನೆ ನಡೆದಿದೆ.

ತ್ರಿಪುರಾದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಐದಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಅಗರ್ತಲಾದಿಂದ 30 ಕಿಲೋಮೀಟರ್ ದೂರದಲ್ಲಿರುವ ಮುರಾಬರಿಯಲ್ಲಿ ಘಟನೆ ನಡೆದಿದೆ. ಮಕ್ಕಳ ಕಳ್ಳತನ ಮಾಡ್ತಿದ್ದ ಅನುಮಾನದ ಮೇಲೆ ಬಟ್ಟೆ ಮಾರಾಟ ಮಾಡ್ತಿದ್ದ ಮೂವರು ವ್ಯಕ್ತಿಗೆ ಹೊಡೆದಿದ್ದಾರೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡಿದ್ದಾರೆ.

ಎರಡನೇ ಘಟನೆ ದಕ್ಷಿಣ ತ್ರಿಪುರಾದ ಕಲಾಚಾರದಲ್ಲಿ ನಡೆದಿದೆ. ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಇಬ್ಬರು ವ್ಯಕ್ತಿಗಳಿಗೆ ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆ.

ಘಟನೆಯಲ್ಲಿ ಒಬ್ಬ ಸಾವನ್ನಪ್ಪಿದ್ದು, ಇನ್ನೊಬ್ಬನಿಗೆ ಗಾಯವಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಪರಿಸ್ಥಿತಿ ಮಿತಿಮೀರದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಂಡಿದೆ. ಎರಡು ದಿನಗಳ ಕಾಲ ಎಸ್ಎಂಎಸ್ ಹಾಗೂ ಇಂಟರ್ನೆಟ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...