alex Certify
ಕನ್ನಡ ದುನಿಯಾ       Mobile App
       

Kannada Duniya

40 ರೂಪಾಯಿಗಾಗಿ ಮೊಟ್ಟೆ ವ್ಯಾಪಾರಿಗೆ ಗುಂಡೇಟು

ಸೋನಿಪತ್ ನ ಗೊಹನಾ ಎಂಬ ಗ್ರಾಮದಲ್ಲಿ ದುಷ್ಕರ್ಮಿಗಳು 40 ರೂಪಾಯಿಗಾಗಿ ಮೊಟ್ಟೆ ವ್ಯಾಪಾರಿ ಮೇಲೆ ಗುಂಡು ಹಾರಿಸಿದ್ದಾರೆ. ಮನೀಶ್ ಕುಮಾರ್ ಎಂಬಾತ ಬೀದಿ ಬದಿಯಲ್ಲಿ ಬೇಯಿಸಿದ ಮೊಟ್ಟೆಗಳನ್ನು ಮಾರಾಟ ಮಾಡುತ್ತಿದ್ದ.

ಅಲ್ಲಿಗೆ ಬಂದಿದ್ದ ಇಬ್ಬರು 4 ಬೇಯಿಸಿದ ಮೊಟ್ಟೆಗಳನ್ನು ತಿಂದಿದ್ದಾರೆ. ಅದಕ್ಕೆ 40 ರೂಪಾಯಿ ಕೊಡುವಂತೆ ಮನೀಶ್ ಕೇಳಿದ್ದಾನೆ. ಹಣ ಕೊಡಲು ಅವರು ನಿರಾಕರಿಸಿದ್ದಾರೆ. ಆದ್ರೆ ಹಣ ಕೊಡುವಂತೆ ಮನೀಶ್ ಒತ್ತಾಯಿಸಿದಾಗ ಕೆರಳಿದ ದುಷ್ಕರ್ಮಿಗಳು ಆತನ ಮೇಲೆ ಗುಂಡು ಹಾರಿಸಿದ್ದಾರೆ.

ಒಂದು ಗುಂಡು ಆತನ ತೋಳನ್ನು ಸೀಳಿಕೊಂಡು ಹೋಗಿದೆ. ಇನ್ನೊಂದು ಎದೆಯನ್ನು ಸವರಿಕೊಂಡು ಸಾಗಿದೆ. ಅದೃಷ್ಟವಶಾತ್ ಎದೆಗೆ ಹೊಕ್ಕಿಲ್ಲ. ಗುಂಡು ಹಾರಿಸಿ ಇಬ್ಬರೂ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಸದ್ಯ ಆಸ್ಪತ್ರೆ ಸೇರಿರೋ ಮೊಟ್ಟೆ ವ್ಯಾಪಾರಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...