alex Certify
ಕನ್ನಡ ದುನಿಯಾ       Mobile App
       

Kannada Duniya

ಐಐಟಿ ವಿದ್ಯಾರ್ಥಿ ಮೇಲೆ ದುಷ್ಕರ್ಮಿಗಳ ಹಲ್ಲೆ

ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು 25 ವರ್ಷದ ಯುವಕನನ್ನು ಥಳಿಸಿ ಪರಾರಿಯಾದ ಘಟನೆ ಉತ್ತರ ಪ್ರದೇಶದ ಗಂಗಾ ನಗರದಲ್ಲಿ ನಡೆದಿದೆ. ದೆಹಲಿ ಐಐಟಿಯಲ್ಲಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ವಿಕಾಸ್ ಪವಾರ್ ಹಲ್ಲೆಗೊಳಗಾದ ಯುವಕ. ಕಾಲೇಜು ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ಈ ಘಟನೆ ನಡೆದಿದೆ.

ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ನನ್ನ ಮೇಲೆ ಇಬ್ಬರು ಚಾಕುವಿನಿಂದ ಹಲ್ಲೆ ನಡೆಸಿದರು. ಮೊದಲ ಬಾರಿಗೆ ನನ್ನ ಮೇಲೆ ದಾಳಿ ನಡೆಸಿದಾಗ ಪಾರಾದೆ. ಆದ್ರೆ, ಎರಡನೇ ಬಾರಿ ದಾಳಿ ನಡೆಸಿದಾಗ ಗಾಯವಾಗಿದೆ ಎಂದು ವಿಕಾಸ್ ತಿಳಿಸಿದ್ದಾರೆ.

ವಿಕಾಸ್ ಈ ಹಲ್ಲೆಯ ಹಿಂದೆ ತನ್ನ ತಂಗಿಯ ಗಂಡ ಹಾಗೂ ಮಾವನ ಕೈವಾಡ ಇರೋದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಮೂರು ತಿಂಗಳ ಹಿಂದೆ ನನ್ನ ತಂಗಿಯ ಮದುವೆ ಮಾಡಿದ್ದೆವು. ಮದುವೆಯ ವೇಳೆ ಗಂಡು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದಾಗಿ ಸುಳ್ಳು ಹೇಳಿದ್ದರು. ಈ ವಿಷಯ ತಿಳಿದ ಮೇಲೆ ಸಹೋದರಿಯನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿರುವುದಾಗಿ ವಿಕಾಸ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...