alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗುವಂತಿದೆ ಈ ಹಸುಗಳು ಕೊಡುವ ಹಾಲಿನ ಪ್ರಮಾಣ

ludhiyana

ಲೂದಿಯಾನ: ನಿತ್ಯದ ಜೀವನಕ್ಕೆ ಹಾಲು ಬೇಕೇ ಬೇಕು. ಹಸುಗಳು ಸಾಮಾನ್ಯವಾಗಿ 20 ರಿಂದ 30 ಲೀಟರ್ ವರೆಗೆ ಹಾಲು ಕೊಡುತ್ತವೆ. ಆದರೆ, ಪಂಜಾಬ್ ಲೂದಿಯಾನದಲ್ಲಿರುವ ಹಸುಗಳು ಕೊಡುವ ಹಾಲಿ ಪ್ರಮಾಣ ನೋಡಿದ್ರೇ ನೀವು ದಂಗಾಗೋದು ಗ್ಯಾರಂಟಿ.

ಇಲ್ಲಿನ ಹಸು ಪ್ರತಿದಿನ 54.3 ಲೀಟರ್ ಹಾಲು ಕೊಡುತ್ತದೆ. ಮತ್ತೊಂದು ಹಸು 53.6 ಲೀಟರ್ ಕೊಡುವ ಮೂಲಕ ದಾಖಲೆಯನ್ನೇ ನಿರ್ಮಿಸಿವೆ. ಎಫ್.ಸಿ. 1363 ಮತ್ತು ಎಫ್.ಸಿ. 1319 ಮಿಶ್ರತಳಿಯ ಜರ್ಸಿ ಹಸುಗಳು ಇವಾಗಿದ್ದು, ಇಷ್ಟೊಂದು ಪ್ರಮಾಣದಲ್ಲಿ ಹಾಲು ಕೊಡುವ ಮೂಲಕ, 2010ರಲ್ಲಿ ನಿರ್ಮಾಣವಾಗಿದ್ದ 53 ಲೀಟರ್ ಹಾಲು ಕೊಡುವ ಹಸುವಿನ ದಾಖಲೆಯನ್ನು ಹಿಂದಿಕ್ಕಿವೆ ಎಂದು ಹೇಳಲಾಗಿದೆ.

ಅಂಗದ್ ದೇವ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ನಿರ್ದೇಶಕ ಪ್ರಕಾಶ್ ಸಿಂಗ್ ಬ್ರಾರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಈ ತಳಿಯ ಹಸುಗಳು ದಿನಕ್ಕೆ 3 ಸಲ ಹಾಲು ಕೊಡುತ್ತವೆ. ಉಷ್ಣಾಂಶವನ್ನೂ ತಡೆಯುವ ಸಾಮರ್ಥ್ಯ ಹೊಂದಿವೆ ಎಂದು ತಿಳಿಸಿದ್ದಾರೆ.

ವಿವಿ ಕುಲಪತಿ ಪ್ರೊ.ಎ.ಎಸ್.ನಂದಾ ಮಾತನಾಡಿ, ವಿಶ್ವವಿದ್ಯಾಲಯದ ಹೈನುಗಾರಿಕೆ ಕೇಂದ್ರದಲ್ಲಿ ಹಲವಾರು ಮಿಶ್ರ ತಳಿಯ ಹಸುಗಳಿವೆ. ಈ ಎರಡು ಹಸುಗಳು ಬರೋಬ್ಬರಿ 54.3 ಹಾಗೂ 53.6 ಲೀಟರ್ ಹಾಲು ಕೊಡುವ ಮೂಲಕ ದಾಖಲೆ ಬರೆದಿವೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...