alex Certify
ಕನ್ನಡ ದುನಿಯಾ       Mobile App
       

Kannada Duniya

25 ಮಂದಿ AAP ಅಭ್ಯರ್ಥಿಗಳಿಗೆ ಠೇವಣಿ ನಷ್ಟ

aapಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ, ಪಂಜಾಬ್ ಹಾಗೂ ಗೋವಾದಲ್ಲಿ ಅಧಿಕಾರ ಹಿಡಿಯುವ ಆತ್ಮ ವಿಶ್ವಾಸದಲ್ಲಿತ್ತು. ಗೋವಾದಲ್ಲಿ ತೀವ್ರ ಮುಖಭಂಗವಾಗಿದ್ದರೆ ಪಂಜಾಬ್ ನಲ್ಲಿ 20 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಪ್ರತಿ ಪಕ್ಷ ಸ್ಥಾನದಲ್ಲಿ ಕೂರುವಂತಾಗಿದೆ.

ಮತದಾನೋತ್ತರ ಸಮೀಕ್ಷೆಗಳು ಪಂಜಾಬ್ ನಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೇರುವ ಸಾಧ್ಯತೆಯಿದೆ ಎಂದು ಹೇಳಿದ್ದವು. ಪಕ್ಷ ಕೂಡಾ 117 ಸ್ಥಾನಗಳ ಪೈಕಿ ಕನಿಷ್ಟ 100 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿಕೊಂಡಿತ್ತು. ಸಂಭ್ರಮಾಚರಣೆಗೆ ಸಿದ್ದತೆಗಳೂ ನಡೆದಿದ್ದವು. ಆದರೆ ಮತದಾರ ಬೇರೆಯದ್ದೇ ತೀರ್ಪನ್ನು ನೀಡಿದ್ದಾನೆ.

20 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಾರ್ಟಿ ಜಯಭೇರಿ ಬಾರಿಸಿದ್ದರೆ, 26 ಕ್ಷೇತ್ರಗಳಲ್ಲಿ ದ್ವಿತೀಯ ಸ್ಥಾನದಲ್ಲಿದೆ. 62 ಕ್ಷೇತ್ರಗಳಲ್ಲಿ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಬೊಹಾ, ಫಜ್ಲಿಕಾ ಮತ್ತು ಮುಕೇರಿಯನ್ ನಲ್ಲಿ AAP ನಾಲ್ಕನೇ ಸ್ಥಾನದಲ್ಲಿದ್ದು, ಸುಜನ್ ಪುರ್ ನಲ್ಲಿ ಐದನೇ ಸ್ಥಾನ ಗಳಿಸಿದೆ. ಈ ಚುನಾವಣೆಯಲ್ಲಿ 25 ಮಂದಿ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಮತದಾನ ಗಳಿಕೆಯಲ್ಲಿ ಆಮ್ ಆದ್ಮಿ ಪಾರ್ಟಿ ಮೂರನೇ ಸ್ಥಾನದಲ್ಲಿದ್ದು, ಶೇ.23 ರಷ್ಟು ಮತಗಳಿಸಿದೆ. ಕಾಂಗ್ರೆಸ್ 77 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಶೇ. 38.5 ರಷ್ಟು ಮತ ಗಳಿಸಿದ್ದರೆ, 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಶಿರೋಮಣಿ ಅಕಾಲಿ ದಳ ಶೇ.25 ರಷ್ಟು ಮತ ಗಳಿಸಿದೆ. 3 ಕ್ಷೇತ್ರಗಳಲ್ಲಿ ಜಯ ಸಾಧಿಸಿರುವ ಬಿಜೆಪಿ ಕೇವಲ ಶೇ.5 ರಷ್ಟು ಮತಗಳಿಸಿದೆ. ಆಮ್ ಆದ್ಮಿ ಮಿತ್ರ ಪಕ್ಷ ಲೋಕ್ ಇನ್ಸಾಫ್ ಪಾರ್ಟಿ 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...