alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಲಲಿತಾ ಕುರಿತು ಹೊಸ ಸತ್ಯ ಬಿಚ್ಚಿಟ್ಟ ವೈದ್ಯ

ಮಾಜಿ ಮುಖ್ಯಮಂತ್ರಿ ಜಯಲಲಿತಾ ಕೊನೆ ದಿನಗಳು ಹೇಗಿತ್ತು ಎನ್ನುವ ಬಗ್ಗೆ ವೈದ್ಯ ಶಿವಕುಮಾರ್ ವಿಚಾರಣಾ ಆಯೋಗದ ಮುಂದೆ ಹೊಸ ವಿಷ್ಯವನ್ನು ಬಹಿರಂಗಪಡಿಸಿದ್ದಾರೆ. ಸೆಪ್ಟೆಂಬರ್ 22, 2016 ರಂದು ಶಶಿಕಲಾ ತಮಗೆ ಕರೆ ಮಾಡಿದ್ದರು. ಸಂಜೆ 7 ಗಂಟೆಗೆ ಕರೆ ಮಾಡಿದ್ದ ಶಶಿಕಲಾ, ಜಯಲಲಿತಾರಿಗೆ ಜ್ವರ ಹಾಗೂ ಕೆಮ್ಮಿದೆ ಎಂದಿದ್ದರಂತೆ. ಹಾಗೆ ಜಯಲಲಿತಾ ಮನೆಯಲ್ಲಿ ಇಬ್ಬರು ಅಪರಿಚಿತ ಕೆಲಸದಾಳುಗಳಿದ್ದರು ಎಂದು ಶಿವಕುಮಾರ್ ಹೇಳಿದ್ದಾರೆ.

ಶಿವಕುಮಾರ್ ಹೇಳಿಕೆ ಈಗ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಶಶಿಕಲಾ ಈವರೆಗೂ ವೈದ್ಯರಿಗೆ ಕರೆ ಮಾಡಿರುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಶಶಿಕಲಾ ನೀಡಿರುವ ಹೇಳಿಕೆ ಹಾಗೂ ವೈದ್ಯರು ನೀಡಿರುವ ಹೇಳಿಕೆಯಲ್ಲಿ ವ್ಯತ್ಯಾಸವಿದೆ. ಜಸ್ಟಿಸ್ ಆರ್ಮುಗಂ ಸ್ವಾಮಿಗೆ ಶಶಿಕಲಾ 99 ಪ್ಯಾರಾಗ್ರಾಫಿನ ಅಫಿಡೆವಿಟ್ ಸಲ್ಲಿಸಿದ್ದು, ಅದ್ರಲ್ಲಿ ವೈದ್ಯರಿಗೆ ಫೋನ್ ಮಾಡಿರುವ ಉಲ್ಲೇಖವಿಲ್ಲ.

ಶಶಿಕಲಾ 28ನೇ ಪ್ಯಾರಾದಲ್ಲಿ ಜಯಲಲಿತಾರಿಗೆ ಮೈ ಹುಷಾರಿಲ್ಲದಂತೆ ಕಂಡಿತ್ತು. ವೈದ್ಯರನ್ನು ಭೇಟಿಯಾಗುವಂತೆ ಸಲಹೆ ನೀಡಿದ್ದೆ ಎಂದಿದ್ದಾರೆ. ರಾತ್ರಿ 9 ಗಂಟೆಗೆ ವೈದ್ಯ ಶಿವಕುಮಾರ್ ಮನೆಗೆ ಬಂದಿದ್ದರು ಎಂದಿದ್ದಾರೆ. ಇತ್ತ ಶಿವಕುಮಾರ್, 7 ಗಂಟೆಗೆ ಕರೆ ಬಂದಿತ್ತು. 8.45ರ ಸುಮಾರಿಗೆ ಜಯಲಲಿತಾ ಮನೆಗೆ ಬಂದಿದ್ದೆ. ಜಯಲಲಿತಾ ಸಾಮಾನ್ಯರಂತೆ ಮಾತನಾಡಿದ್ದರು. ಆದ್ರೆ ಮನೆಯಲ್ಲಿ ಇಬ್ಬರು ಅಪರಿಚಿತ ಕೆಲಸದಾಳುಗಳಿದ್ದರು ಎಂದಿದ್ದಾರೆ. ಆದ್ರೆ ಶಶಿಕಲಾ ಕೆಲಸದಾಳುಗಳ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...