alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮೀಯ ಮಾದರಿಯಲ್ಲಿ ಅಪಹೃತ ಯುವತಿಯ ರಕ್ಷಣೆ

car 5667919 ವರ್ಷದ ಯುವತಿಯನ್ನು ದುಷ್ಕರ್ಮಿಗಳು ಕಾರಿನಲ್ಲಿ ಅಪಹರಿಸಿಕೊಂಡು ಹೋಗುತ್ತಿದ್ದ ವೇಳೆ ಸುಮಾರು 5 ಕಿ.ಮೀ. ವರೆಗೆ ಸಿನಿಮೀಯ ಮಾದರಿ, ತಮ್ಮ ವಾಹನದಲ್ಲಿ ಬೆನ್ನಟ್ಟಿದ ಪೊಲೀಸರು ಕೊನೆಗೂ ಯುವತಿಯನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರ ದೆಹಲಿಯಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಹಿಮಾಂಶು ಎಂಬಾತ ತನ್ನ ಗೆಳತಿ 19 ವರ್ಷದ ಮುಸ್ಕಾನ್ ಜೊತೆ ವಜೀರಾಬಾದ್ ಗೆ ತೆರಳಲು ಬುರಾರಿ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದಾನೆ. ಆಗ ಕಾರಿನಲ್ಲಿ ಬಂದ ಮೂವರು ಡ್ರಾಪ್ ಮಾಡುವುದಾಗಿ ತಿಳಿಸಿದ್ದು, ಹಿಮಾಂಶು ಹಾಗೂ ಮುಸ್ಕಾನ್ ಕಾರಿನಲ್ಲಿ ಕುಳಿತ ವೇಳೆ ಅವರುಗಳೆಲ್ಲ ಮದ್ಯಪಾನ ಮಾಡಿರುವುದು ಗೊತ್ತಾಗಿದೆ.

ಕಾರು ನಿಲ್ಲಿಸಲು ಹೇಳಿದರೂ ಕೇಳದ ಅವರು, ಹಿಮಾಂಶುನನ್ನು ಕಾರಿನಿಂದ ಹೊರ ತಳ್ಳಿ ವೇಗವಾಗಿ ಸಾಗಿದ್ದಾರೆ. ಗಾಬರಿಗೊಂಡ ಹಿಮಾಂಶು, ಕಾಶ್ಮೀರಿ ಗೇಟ್ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಮಹೀಂದರ್ ಸಿಂಗ್ ಹಾಗೂ ಮುಖ್ಯ ಪೇದೆ ಜಗದೀಶ್ ಅವರಿಗೆ ವಿಷಯ ತಿಳಿಸಿದ್ದಾನೆ. ತಡ ಮಾಡದ ಅವರು ಹಿಮಾಂಶುವನ್ನು ತಮ್ಮ ಜೊತೆಯಲ್ಲೇ ಕರೆದುಕೊಂಡು ವಾಹನವನ್ನು ಬೆನ್ನಟ್ಟಿದ್ದಾರೆ. ಸುಮಾರು 5 ಕಿ.ಮೀ. ವರೆಗೂ ವಾಹನ ಚೇಸ್ ಮಾಡಿ ಕೊನೆಗೂ ಕಾರ್ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಯಭೀತಳಾಗಿದ್ದ ಯುವತಿಯನ್ನು ರಕ್ಷಿಸಿದ ಪೊಲೀಸರು ಆರೋಪಿಗಳಾದ ಸಚಿನ್ ಚೌಧರಿ, ಶಿವಕುಮಾರ್ ಹಾಗೂ ಸೌರಭ್ ರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...