alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರಿನಲ್ಲಿ ಆಟವಾಡುವಾಗಲೇ ಕಾದಿತ್ತು ದುರ್ವಿದಿ

car-telang

ಹೈದರಾಬಾದ್: ತೆಲಂಗಾಣದ ಕೊತ್ತಗೂಡಂ ಸಮೀಪದ ಭದ್ರಾದ್ರಿಯಲ್ಲಿ ಕಾರಿನಲ್ಲಿ ಆಟವಾಡುತ್ತಿದ್ದ ಮಕ್ಕಳು ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮದುವೆ ಸಮಾರಂಭಕ್ಕೆ ಬಂದಿದ್ದ ಸಂದೀಪ್ ಮತ್ತು ಕವಿತಾ ದಂಪತಿ 5 ಹಾಗೂ 2 ವರ್ಷದ ಮಕ್ಕಳನ್ನು ಕಾರಿನಲ್ಲೇ ಬಿಟ್ಟು ಮದುವೆ ಹಾಲ್ ಗೆ ಹೋಗಿದ್ದಾರೆ.

ಮಕ್ಕಳು ಕಾರಿನಲ್ಲಿ ಆಟವಾಡುವಾಗ ಡೋರ್ ಲಾಕ್ ಆಗಿದ್ದು, ಇಬ್ಬರೂ ಅಲ್ಲೇ ಅಸ್ವಸ್ಥರಾಗಿದ್ದಾರೆ. ಪೋಷಕರು ಮದುವೆ ಮುಗಿಸಿ ಬರುವಷ್ಟರಲ್ಲಿ ಮಕ್ಕಳು ಗಂಭೀರ ಸ್ಥಿತಿ ತಲುಪಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಒಂದು ಮಗು ಮೃತಪಟ್ಟಿದೆ.

ಮತ್ತೊಂದು ಮಗು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳ ಸಾವಿನಿಂದಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...