alex Certify
ಕನ್ನಡ ದುನಿಯಾ       Mobile App
       

Kannada Duniya

FDI ವಿಚಾರದಲ್ಲಿ ಮೋದಿ ಯುಟರ್ನ್ : ಟ್ವಿಟ್ಟರ್ ನಲ್ಲಿ ಪ್ರಶ್ನೆ

ಸಿಂಗಲ್‌ ಬ್ರ್ಯಾಂಡ್‌ ರಿಟೇಲ್‌ನಲ್ಲಿ ಶೇ.100 ಹಾಗೂ ಏರ್‌ ಇಂಡಿಯಾದಲ್ಲಿ ಶೇ.49 ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್‌ಡಿಐ)ಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. ವಿದೇಶಿ ವಿಮಾನಯಾನ ಸಂಸ್ಥೆಗಳು ಸರ್ಕಾರದ ಅನುಮೋದನೆ ಮೂಲಕ ‘ಏರ್‌ ಇಂಡಿಯಾ’ದಲ್ಲಿ ಶೇ.49ರಷ್ಟು ಹೂಡಿಕೆ ಮಾಡಲು ಒಪ್ಪಿಗೆ ದೊರೆತಿದೆ.

ಏರ್‌ ಇಂಡಿಯಾದ ಸಮರ್ಥ ನಿರ್ವಹಣೆ ಹಾಗೂ ಮಾಲೀಕತ್ವ ಭಾರತೀಯರಲ್ಲಿಯೇ ಉಳಿಯಬೇಕು ಎಂಬ ಉದ್ದೇಶದೊಂದಿಗೆ ಗರಿಷ್ಠ ಶೇ.49ರಷ್ಟು ನೇರ ಅಥವಾ ಪರೋಕ್ಷ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ ಅಂತಾ ಸರ್ಕಾರ ಹೇಳಿದೆ.

ಸಿಂಗಲ್‌ ಬ್ರ್ಯಾಂಡ್ ರಿಟೇಲ್‌ ಕ್ಷೇತ್ರದಲ್ಲಿ ಸರ್ಕಾರದ ಅನುಮತಿ ಇಲ್ಲದೇ ಶೇ.100ರಷ್ಟು ಎಫ್‌ಡಿಐಗೆ ಅವಕಾಶ ನೀಡಲಾಗುತ್ತದೆ. ಮಾರಾಟ ಮಾಡುವ ಉತ್ಪನ್ನ ‘ಸಿಂಗಲ್‌ ಬ್ರ್ಯಾಂಡ್‌’ ಆಗಿರಬೇಕು. ಜಾಗತಿಕ ಮಟ್ಟದಲ್ಲಿ ಆ ಉತ್ಪನ್ನವನ್ನು ಅದೇ ಬ್ರ್ಯಾಂಡ್‌ನಲ್ಲಿ ಮಾರಾಟ ಮಾಡಬೇಕು ಎಂಬ ಷರತ್ತಿನ ಅಡಿಯಲ್ಲಿ ಸರ್ಕಾರ ವಿದೇಶಿ ಹೂಡಿಕೆದಾರರಿಗೆ ಒಪ್ಪಿಗೆ ನೀಡಲಿದೆ.

ರಿಯಲ್‌ ಎಸ್ಟೇಟ್‌ ಸೇವೆಗಳಲ್ಲಿಯೂ ಎಫ್‌ಡಿಐ ನಿಯಮಾವಳಿಗೆ ಸಡಿಲಿಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ. 2012ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಬಿಜೆಪಿ ನಾಯಕರು ಎಫ್ ಡಿ ಐ ಅನ್ನು ವಿರೋಧಿಸಿದ್ದರು. ಈಗ ಮೋದಿ ಯುಟರ್ನ್ ತೆಗದುಕೊಂಡಿದ್ದಾರೆ ಅಂತಾ ಟ್ವಿಟ್ಟರ್ ನಲ್ಲಿ ಕೆಲವರು ಟೀಕೆ ಮಾಡಿದ್ದಾರೆ. ಆ ಸಮಯದಲ್ಲಿ ಮೋದಿ ಮಾಡಿದ್ದ ಟ್ವೀಟ್ ಅನ್ನು ನೆನಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...