alex Certify
ಕನ್ನಡ ದುನಿಯಾ       Mobile App
       

Kannada Duniya

ಜಮ್ಮು- ಕಾಶ್ಮೀರವನ್ನು ಪಾಕ್ ಮತ್ತು ಚೀನಾಕ್ಕೆ ಸೇರಿಸಿದ ಟ್ವಿಟ್ಟರ್

1_1455776331

ಸಾಮಾಜಿಕ ಜಾಲತಾಣಗಳು ಇಂದು ಸಾಕಷ್ಟು ಜನಪ್ರಿಯವಾಗಿರುವುದು ಎಲ್ಲರಿಗೂ ಗೊತ್ತು. ಕೆಲವೊಮ್ಮೆ ಇಂತಹ ಜಾಲತಾಣಗಳು ವಿವಾದದ ಅಲೆಯನ್ನೇ ಎಬ್ಬಿಸುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರಸಿದ್ದ ಸಾಮಾಜಿಕ ಜಾಲತಾಣ ಟ್ವಿಟ್ಟರ್, ಜಮ್ಮು ಮತ್ತು ಕಾಶ್ಮೀರ ಭಾಗವನ್ನು ಪಾಕಿಸ್ತಾನ ಮತ್ತು ಚೀನಾ ಭೂಪಟಕ್ಕೆ ಸೇರಿಸಿ ವಿವಾದ ಎಬ್ಬಿಸಿದೆ.

ಹೌದು. ಜಮ್ಮು ಮತ್ತು ಕಾಶ್ಮೀರ ಭಾರತದ ಸಿಂಧೂರವಿದ್ದಂತೆ. ಇಂತಹ ಪ್ರದೇಶವನ್ನು ಆಕ್ರಮಿಸಿಕೊಳ್ಳುವುದಿರಲಿ, ಶತ್ರುಗಳು ಹತ್ತಿರ ಬರುವುದಕ್ಕೂ ನಮ್ಮ ಸೇನೆ ಬಿಡುವುದಿಲ್ಲ. ಜಮ್ಮು ಮತ್ತು ಕಾಶ್ಮೀರವನ್ನು ಟ್ವಿಟ್ಟರ್ ಭಾರತದಿಂದ ಹೊರಗಿಟ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಟ್ವಿಟ್ಟರ್ ಬಳಕೆದಾರರು ಟ್ವೀಟ್ ಕಂಪೋಸ್ ಮಾಡುವಾಗ ಲೊಕೇಷನ್ ಆಯ್ಕೆ ಮಾಡಿಕೊಳ್ಳುವ ಅವಕಾಶವಿದ್ದು, ಆದರೆ ಇಲ್ಲಿ ಜಮ್ಮು ಮತ್ತು ಕಾಶ್ಮೀರ ಎಂದು ಟೈಪಿಸಿದರೆ ಅಲ್ಲಿ ಭಾರತದ ಆಯ್ಕೆಯ ಬದಲಾಗಿ ಚೀನಾ ಮತ್ತು ಪಾಕಿಸ್ತಾನ ಆಯ್ಕೆಗಳು ಬರುತ್ತವೆ. ಅಲ್ಲದೇ ಜಮ್ಮು, ಪಾಕಿಸ್ತಾನ ಮತ್ತು ಜಮ್ಮು ಮತ್ತು ಕಾಶ್ಮೀರ, ರಿಪಬ್ಲಿಕ್ ಆಫ್ ಚೀನಾ ಎಂಬ ಆಯ್ಕೆಗಳನ್ನು ತೋರಿಸಲಾಗುತ್ತಿದ್ದು ಟ್ವಿಟ್ಟರ್ ಸಂಸ್ಥೆಯ ಈ ಯಡವಟ್ಟಿಗೆ ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಈವರೆಗೂ ಟ್ವಿಟ್ಟರ್ ಸಂಸ್ಥೆ ಈ ಕುರಿತು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲವಾದರೂ ಕಣ್ತಪ್ಪಿನಿಂದ ಈ ಪ್ರಮಾದ ನಡೆದಿರಬಹುದು ಎನ್ನಲಾಗುತ್ತಿದೆ. ಏನೇ ಇರಲಿ, ಸಾಮಾಜಿಕ ಬದ್ದತೆಯನ್ನೂ ಸಹ ಹೊಂದಿರಬೇಕಾದ ಇಂತಹ ಸಾಮಾಜಿಕ ಜಾಲತಾಣಗಳು ದೇಶ, ಗಡಿ ವಿಚಾರದಲ್ಲಿ ಇಂತಹ ತಪ್ಪು ಮಾಡುವುದು ಸಮಂಜಸವಲ್ಲ ಎಂಬುದಂತೂ ಸತ್ಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...