alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟ್ಟಾರ್ಥಿಗಳ ಗೇಲಿಗೊಳಗಾಗಿದೆ ನಿತಿನ್ ಗಡ್ಕರಿಯವರ ಈ ಫೋಟೋ

nitin-gadkari 4458ಇಂದು ವಿಶ್ವದಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಚಂಡೀಘಡದಲ್ಲಿ 30 ಸಾವಿರ ಮಂದಿಯ ಜೊತೆ ಯೋಗ ದಿನಾಚರಣೆಯನ್ನು ಆಚರಿಸಿದ್ದು, ಈ ಸಂದರ್ಭದಲ್ಲಿ ಹಲವು ಆಸನಗಳನ್ನು ಪ್ರದರ್ಶಿಸಿದ್ದಾರೆ.

ಅದೇ ರೀತಿ ಭಾರತದ ವಿವಿಧ ಭಾಗಗಳಲ್ಲೂ ‘ವಿಶ್ವ ಯೋಗ ದಿನಾಚರಣೆ’ ಮಾಡಲಾಗಿದ್ದು, ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಪಾಲ್ಗೊಂಡಿದ್ದು, ಈ ಫೋಟೋವನ್ನು ಟ್ವೀಟ್ ಮಾಡಲಾಗಿದೆ.

ನಿತಿನ್ ಗಡ್ಕರಿಯವರು ಧರಿಸಿದ್ದ ದಿರಿಸು ಟ್ವಿಟ್ಟಾರ್ಥಿಗಳ ಗೇಲಿಗೆ ಗುರಿಯಾಗಿದ್ದು, ಇವರೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಲ ರಾಜಕಾರಣಿಗಳು ಯೋಗ ದಿನಾಚರಣೆಗೆ ತಕ್ಕಂತೆ ದಿರಿಸು ಧರಿಸಿದ್ದರೆ ನಿತಿನ್ ಗಡ್ಕರಿಯವರು ಮಾತ್ರ ಎಂದಿನಂತೆ ವೆಸ್ಟ್ ಕೋಟ್ ಹಾಗೂ ಪ್ಯಾಂಟ್ ಧರಿಸಿ ಯೋಗ ಮಾಡಿದ್ದಾರೆ. ಇದಕ್ಕೆ ಕೆಲವರು ಈ ಕಾರ್ಯಕ್ರಮದ ಬಳಿಕ ನಿತಿನ್ ಗಡ್ಕರಿ ನೇರವಾಗಿ ಕಛೇರಿಗೆ ತೆರಳುತ್ತಾರೆಂದು ಕಾಣುತ್ತದೆ ಎಂದಿದ್ದರೆ ಮತ್ತೆ ಹಲವರು ತಮ್ಮ ವಸ್ತ್ರದ ಪ್ರಚಾರ ಮಾಡುವ ಜಾಹೀರಾತುದಾರರಿಗೆ ಈ ಫೋಟೋ ಸಹಕಾರಿಯಾಗಿದೆ ಎಂದು ಕುಹಕವಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...