alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾದಲ್ಲಿ ಸೆರೆಯಾಯ್ತು ಶಾಸಕನ ಗೂಂಡಾ ವರ್ತನೆ

ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕರ ಗೂಂಡಾಗಿರಿ ಮುಂದುವರೆದಿದೆ. ಇದಕ್ಕೆ ಸಾಕ್ಷಿಯೆಂಬಂತೆ ಆಘಾತಕಾರಿ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಜೆಪಿ ಶಾಸಕ ಹರ್ಷವರ್ಧನ್ ಬಾಜಪೇಯಿ ಅಲಹಾಬಾದ್ ನ ಪೊಲೀಸ್ ವರಿಷ್ಠಾಧಿಕಾರಿಗೆ ಬೆದರಿಕೆ ಹಾಕ್ತಿರೊ ದೃಶ್ಯ ಎಲ್ಲೆಡೆ ಹರಿದಾಡ್ತಿದೆ. ಅಲಹಾಬಾದ್ ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಕರೆದಿದ್ದ ಸಭೆಗೆ ಶಾಸಕರು ಬಂದಾಗ ಈ ಘಟನೆ ನಡೆದಿದೆ.

ಎಸ್ ಪಿ ಗಂಗಪಾರ್ ಸುನೀಲ್ ಸಿಂಗ್, ಸಿಎಂ ನಡೆಸುತ್ತಿದ್ದ ಸಭೆಗೆ ಅಲಹಾಬಾದ್ ಉತ್ತರ ಕ್ಷೇತ್ರದ ಶಾಸಕ ಹರ್ಷವರ್ಧನ್ ಅವರನ್ನು ಹೋಗಲು ಬಿಡಲಿಲ್ಲ. ಹೀಗಾಗಿ ತಾಳ್ಮೆ ಕಳೆದುಕೊಂಡ ಶಾಸಕ ಪೊಲೀಸ್ ಅಧಿಕಾರಿಗೆ ನಿಂದಿಸಿದ್ದಾರೆ. ಅಲ್ಲದೆ ಹೊಡಿ ಬಡಿ ಭಾಷೆಯಿಂದ ಹೇಳಿದ್ರೆ ಮಾತ್ರ ನಿಮಗೆ ಅರ್ಥವಾಗುತ್ತೆ ಅಂತಾ ಹೇಳುವ ಮೂಲಕ ಬೆದರಿಕೆ ಹಾಕಿದ್ದಾರೆ. ಇದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಲಹಾಬಾದ್ ನಲ್ಲಿ ಅಧಿಕಾರಿಗಳು ಮತ್ತು ಸಂತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಮತ್ತು ಕ್ಯಾಬಿನೆಟ್ ಸಚಿವರಿಗಷ್ಟೇ ಅವಕಾಶ ನೀಡಲಾಗಿತ್ತು. ಹೀಗಾಗಿ ಶಾಸಕ ಹರ್ಷವರ್ಧನ್ ಅವರನ್ನು ಎಸ್ ಪಿ ತಡೆದಿದ್ದಕ್ಕೆ, ಇತರ ಪೊಲೀಸರ ಮುಂದೆ ಬೆದರಿಕೆ ಒಡ್ಡಿದ್ದಾರೆ. ಇದೀಗ ಈ ವಿಚಾರ ಭಾರಿ ವಿವಾದಕ್ಕೆ ಕಾರಣವಾಗಿದೆ. ಆದ್ರೆ ಈ ಸಂಬಂಧ ಎಸ್ ಪಿ ಗಂಗಪಾರ್ ಸುನೀಲ್ ಸಿಂಗ್, ಶಾಸಕನ ವಿರುದ್ಧ ಯಾವುದೇ ದೂರು ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...