alex Certify
ಕನ್ನಡ ದುನಿಯಾ       Mobile App
       

Kannada Duniya

ಬಲ ಪ್ರದರ್ಶನಕ್ಕೆ ಮುಂದಾದ ಟಿಟಿವಿ ದಿನಕರನ್

ttv-dinakaranಜಯಲಲಿತಾ ನಿಧನರಾದ ಬಳಿಕ ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ಬಣವೆಂದು ಇಬ್ಬಾಗವಾಗಿದ್ದ ಎಐಎಡಿಎಂಕೆ ಪಕ್ಷ ಈಗ ಮತ್ತೆ ಒಂದಾಗುವತ್ತ ಸಾಗಿದೆ. ಮಹತ್ವದ ಬೆಳವಣಿಗೆಯಲ್ಲಿ ಶಶಿಕಲಾ ಬಣದಿಂದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಎಡಪ್ಪಾಡಿ ಪಳನಿಸ್ವಾಮಿ, ಶಶಿಕಲಾ, ಟಿಟಿವಿ ದಿನಕರನ್ ಸೇರಿದಂತೆ ಅವರ ಕುಟುಂಬದವರನ್ನು ಪಕ್ಷದಿಂದ ಹೊರಗಿಡಲು ನಿರ್ಧರಿಸಿದ್ದು, ಇದಕ್ಕೆ 20 ಕ್ಕೂ ಅಧಿಕ ಮಂತ್ರಿಗಳು ಬೆಂಬಲ ಸೂಚಿಸಿದ್ದಾರೆಂದು ಹೇಳಲಾಗಿದೆ.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿರುವ ಶಶಿಕಲಾರನ್ನು ಉಚ್ಚಾಟಿಸಿ ಆ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂರನ್ನು ತರಲು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸಮ್ಮತಿಸಿದ್ದು, ಇದಕ್ಕೆ ಪೂರಕ ಪ್ರಕ್ರಿಯೆಗಳು ನಡೆಯುತ್ತಿವೆ ಎನ್ನಲಾಗಿದೆ. ಈ ಮಧ್ಯೆ ಎಐಎಡಿಎಂಕೆ ಮೇಲೆ ಹಿಡಿತ ಸಾಧಿಸಲು ಮುಂದಾಗಿರುವ ಟಿಟಿವಿ ದಿನಕರನ್, ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾರ ಸೂಚನೆಯಂತೆ ಟಿಟಿವಿ ದಿನಕರನ್, ಇಂದು ಎಐಎಡಿಎಂಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಾಸಕರ ಸಭೆ ಕರೆದಿದ್ದಾರೆ. ಚೆನ್ನೈನ ಎಐಎಡಿಎಂಕೆ ಕಛೇರಿಯಲ್ಲಿ ಸಂಜೆ ಸಭೆ ನಡೆಯಲಿದ್ದು, ಎಷ್ಟು ಮಂದಿ ಈ ಸಭೆಗೆ ಹಾಜರಾಗಲಿದ್ದಾರೆಂಬುದನ್ನು ಕಾದು ನೋಡಬೇಕಿದೆ. ಕಳೆದ ರಾತ್ರಿ ಏಳು ಮಂದಿ ಶಾಸಕರು ಟಿಟಿವಿ ದಿನಕರನ್ ರನ್ನು ಭೇಟಿಯಾಗಿ ತಮ್ಮ ಬೆಂಬಲ ಸೂಚಿಸಿದ್ದಾರೆಂದು ಹೇಳಲಾಗಿದ್ದು, ಇನ್ನಷ್ಟು ಶಾಸಕರು ತಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆಂಬ ವಿಶ್ವಾಸವನ್ನು ದಿನಕರನ್ ಹೊಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...