alex Certify
ಕನ್ನಡ ದುನಿಯಾ       Mobile App
       

Kannada Duniya

ತಮಿಳುನಾಡಿನಲ್ಲಿ ಅಸ್ತಿತ್ವಕ್ಕೆ ಬಂತು ಮತ್ತೊಂದು ಹೊಸ ಪಕ್ಷ

ಶಶಿಕಲಾರ ಸೋದರಳಿಯ ಹಾಗೂ ಆರ್ ಕೆ ನಗರ ಕ್ಷೇತ್ರದ ಶಾಸಕ ಟಿವಿವಿ ದಿನಕರನ್ ಹೊಸ ಪಕ್ಷ ಸ್ಥಾಪಿಸಿದ್ದಾರೆ. ಅಮ್ಮ ಮಕ್ಕಳ್ ಮುನೇತ್ರ ಕಳಗಂ ಅಂತಾ ತಮ್ಮ ಹೊಸ ಪಕ್ಷಕ್ಕೆ ಹೆಸರಿಟ್ಟಿದ್ದಾರೆ. ಮದುರೈನ ಮೇಲೂರಿನಲ್ಲಿ ಹೊಸ ಪಕ್ಷವನ್ನು ಲಾಂಚ್ ಮಾಡಲಾಯ್ತು.

ಪಳನಿಸ್ವಾಮಿ ಸರ್ಕಾರವನ್ನು ವಿರೋಧಿಸಿ, ಟಿಟಿವಿ ದಿನಕರನ್ ರನ್ನು ಬೆಂಬಲಿಸಿದ್ದ 18 ಶಾಸಕರನ್ನು ತಮಿಳುನಾಡು ವಿಧಾನಸಭೆಯ ಸ್ಪೀಕರ್ ಅನರ್ಹಗೊಳಿಸಿದ್ದರು. ಅವರೆಲ್ಲರೂ ದಿನಕರನ್ ಹೊಸ ಪಕ್ಷವನ್ನು ಬೆಂಬಲಿಸಿದ್ದಾರೆ, ಮೂವರು ಹಾಲಿ ಶಾಸಕರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದು ಪ್ರತ್ಯೇಕ ಪಕ್ಷವಲ್ಲ, ನಾವು ಎಐಎಡಿಎಂಕೆಯ ಎರಡು ಎಲೆಗಳ ಲಾಂಛನವನ್ನು ಪಡೆಯಲು ಹೋರಾಟ ಮಾಡಲಿದ್ದೇವೆ ಅಂತಾ ದಿನಕರನ್ ಹೇಳಿದ್ದಾರೆ. ತಮಿಳುನಾಡು ಸರ್ಕಾರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡ್ತಿದೆ, ಅದಕ್ಕೆ ಹೆಚ್ಚು ಕಾಲ ಉಳಿಗಾಲವಿಲ್ಲ ಅಂತಾ ಭವಿಷ್ಯ ನುಡಿದಿದ್ದಾರೆ.

ಎಐಎಡಿಎಂಕೆ ಸಿಂಹವಿದ್ದಂತೆ. ದಿನಕರನ್ ರ ಹೊಸ ಪಕ್ಷ ಅಮ್ಮ ಮಕ್ಕಳ್ ಮುನೇತ್ರ ಕಳಗಂ ಆ ಸಿಂಹದ ಮೇಲೆ ಕುಳಿತ ಸೊಳ್ಳೆಯಿದ್ದಂತೆ ಅಂತಾ ತಮಿಳುನಾಡಿನ ಸಚಿವ ಜಯಕುಮಾರ್ ತಿರುಗೇಟು ನೀಡಿದ್ದಾರೆ. ಕಳೆದ 1 ತಿಂಗಳ ಅವಧಿಯಲ್ಲಿ ತಮಿಳುನಾಡಿನಲ್ಲಿ 2 ಪಕ್ಷಗಳು ಸ್ಥಾಪನೆಯಾಗಿವೆ. ನಟ ಕಮಲ್ ಹಾಸನ್ ಕೂಡ ಹೊಸ ಪಕ್ಷ ಕಟ್ಟಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...