alex Certify
ಕನ್ನಡ ದುನಿಯಾ       Mobile App
       

Kannada Duniya

ಇತಿಹಾಸದಲ್ಲಿ ಇದೇ ಮೊದಲ ಬಾರಿ 6 ದಿನ ಬಾಗಿಲು ಮುಚ್ಚಲಿದೆ ತಿರುಪತಿ ದೇವಸ್ಥಾನ

ತಿರುಪತಿಯ ಬಾಲಾಜಿ ಭಕ್ತರಿಗೊಂದು ಮಹತ್ವದ ಸುದ್ದಿಯಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿ ತಿರುಪತಿಯ ವೆಂಕಟೇಶ್ವರ ದೇವಾಲಯ ಸತತ 6 ದಿನ ಬಾಗಿಲು ಮುಚ್ಚಲಿದೆ. ಆಗಸ್ಟ್ 11 ಸಂಜೆ 6 ಗಂಟೆಯಿಂದ ಆಗಸ್ಟ್ 17 ರ ಸಂಜೆ 6 ಗಂಟೆಯವರೆಗೆ ಬಾಗಿಲು ಮುಚ್ಚಲಿದೆ.

ದೇವಾಲಯದ ಆಡಳಿತದ ಮಂಡಳಿ ಭಾನುವಾರ ನಡೆದ ವಿಶೇಷ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ದೇವಾಲಯದ ಆಡಳಿತ ಮಂಡಳಿ ತೀರ್ಮಾನದಿಂದ ಭಕ್ತರಿಗೆ ತೊಂದರೆಯಾಗಲಿದೆ. ಮಹಾಸಂಪ್ರೋಕ್ಷಣಮ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ತಿಮ್ಮಪ್ಪನ ವಿಗ್ರಹಕ್ಕೆ ಅಷ್ಟಬಂಧನ ಬಾಲಾಲಯ ಮಹಾಸಂ ಪ್ರೋಕ್ಷಣಮ್ ಮಾಡಲಾಗುವುದು. 12 ವರ್ಷಗಳಿಗೊಮ್ಮೆ ಇದನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ದೇವಸ್ಥಾನದ ಪೂಜಾರಿಗಳಿಗೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅನುಮತಿಯಿರುತ್ತದೆ. ದೇವಸ್ಥಾನದ ಶುದ್ಧೀಕರಣ ನಡೆಯಲಿದೆ.

ಎರಡನೇ ಶನಿವಾರ, ಭಾನುವಾರ ಹಾಗೂ ಸ್ವಾತಂತ್ರ್ಯ ದಿನ ಒಟ್ಟಿಗೆ ಬಂದಿದೆ. ಮೂರು ದಿನ ರಜೆಯಿರುವ ಕಾರಣ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಅವ್ರ ನಿಯಂತ್ರಣ ಕಷ್ಟಸಾಧ್ಯ. ಹಾಗಾಗಿ ವಾರ ಪೂರ್ತಿ ದೇವಸ್ಥಾನದ ಬಾಗಿಲು ಮುಚ್ಚುವ ನಿರ್ಧಾರಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಬಂದಿದೆ ಎನ್ನಲಾಗ್ತಿದೆ. ಆಗಸ್ಟ್ 9 ರಿಂದಲೇ ಮೆಟ್ಟಿಲಿನ ಮೂಲಕ ಬೆಟ್ಟವೇರುವ ಪ್ರವೇಶ ದ್ವಾರದ ಬಾಗಿಲು ಮುಚ್ಚಲಾಗುವುದು. ಆಗಸ್ಟ್ 10ರ ರಾತ್ರಿ ತಿರುಮಲದಲ್ಲಿರುವ ಎಲ್ಲ ಯಾತ್ರಿಗಳು ಖಾಲಿಯಾಗಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...