alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿ ತಿಮ್ಮಪ್ಪನ ಭಕ್ತರಿಗೊಂದು ಮಾಹಿತಿ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯವಾಗಿರುವ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಲಡ್ಡು ಪ್ರಸಾದ ಕೊಡಲಾಗುತ್ತದೆ.

ಲಡ್ಡು ಪ್ರಸಾದ ತಯಾರಿಸುವಾಗ, ಆಹಾರ ಸುರಕ್ಷತೆ ನಿಯಮಗಳನ್ನು ಪಾಲಿಸುತ್ತಿಲ್ಲ. ಇದರಿಂದಾಗಿ ನಟ್, ಬೋಲ್ಟ್, ಬೆವರು, ಕೂದಲು ಲಡ್ಡುವಿನಲ್ಲಿ ಸೇರಿಕೊಳ್ಳುತ್ತಿವೆ ಎಂದು ಬೆಂಗಳೂರಿನ ಆರ್.ಟಿ.ಐ. ಕಾರ್ಯಕರ್ತ ಟಿ. ನರಸಿಂಹಮೂರ್ತಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ದೂರು ನೀಡಿದ್ದರು.

ಭಕ್ತರಿಗೆ ಪ್ರಸಾದ ರೂಪದಲ್ಲಿ ಕೊಡುವ ಲಡ್ಡು ಆಹಾರ ವ್ಯಾಖ್ಯಾನದಡಿ ಬರುವುದಿಲ್ಲ. ಲಡ್ಡು ಸರಕು ಅಲ್ಲ, ಆಹಾರವೂ ಅಲ್ಲ. ಭಕ್ತರು ಗ್ರಾಹಕರಲ್ಲ, ಲಾಭ ಗಳಿಕೆಯ ಉದ್ದೇಶವನ್ನೂ ಹೊಂದಿಲ್ಲ. ಹಾಗಾಗಿ ಪ್ರಾಧಿಕಾರದಿಂದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಟಿ.ಟಿ.ಡಿ. ವಾದಿಸಿತ್ತು.

ಆದರೆ, ಇದನ್ನು ಒಪ್ಪದ ಪ್ರಾಧಿಕಾರ, ಲಡ್ಡು ತಯಾರಿಸಲು ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ಟಿ.ಟಿ.ಡಿ.ಗೆ ಸೂಚನೆ ನೀಡಿದ್ದು, ಕ್ರಮ ಕೈಗೊಳ್ಳಲು ಆಂಧ್ರಪ್ರದೇಶದ ಆಹಾರ ಸುರಕ್ಷತಾ ಆಯುಕ್ತರಿಗೆ ತಿಳಿಸಿತ್ತು. 2016 ರ ಅಕ್ಟೋಬರ್ ನಲ್ಲಿ ಪ್ರಾಧಿಕಾರ ಸೂಚಿಸಿದ್ದರೂ, ಟಿ.ಟಿ.ಡಿ. ಪರವಾನಗಿ ಪಡೆದಿರಲಿಲ್ಲ. ಈಗ ಅನುಮತಿ ಪಡೆದುಕೊಂಡಿದೆ.

ಚೆನ್ನೈನ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪರವಾನಗಿ ಘಟಕದಿಂದ ಆಗಸ್ಟ್ 3 ರಂದು ಪರವಾನಗಿ ಪಡೆದುಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...