alex Certify
ಕನ್ನಡ ದುನಿಯಾ       Mobile App
       

Kannada Duniya

ಹುಲಿಯೊಂದಿಗೆ ಹೋರಾಡಿ ಸೆಲ್ಫಿ ತೆಗೆದುಕೊಂಡ್ಲು ಯುವತಿ

ತಮ್ಮ ಮನೆ ಮುಂದೆ ಕಟ್ಟಿ ಹಾಕಿದ್ದ ಮೇಕೆಯನ್ನು ತಿನ್ನಲು ಬಂದ ಹುಲಿಯೊಂದಿಗೆ ಹೋರಾಡಿದ 23 ವರ್ಷದ ಯುವತಿಯೊಬ್ಬಳು ಅದನ್ನು ಓಡಿಸಲು ಯಶಸ್ವಿಯಾಗಿದ್ದಾಳೆ.

ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದ್ದು, ರೂಪಾಲಿ ಎಂಬ ಈ ಯುವತಿ ಮನೆಯೊಳಗಿದ್ದ ವೇಳೆ ಮೇಕೆ ಕಿರುಚುತ್ತಿರುವುದು ಕೇಳಿಸಿದೆ. ತಕ್ಷಣವೇ ಹೊರ ಬಂದ ಆಕೆಗೆ ಹುಲಿಯೊಂದು ಮೇಕೆಯನ್ನು ಎಳೆದೊಯ್ಯಲು ಯತ್ನಿಸಿರುವುದು ಕಣ್ಣಿಗೆ ಬಿದ್ದಿದೆ.

ಎದೆಗುಂದದ ಯುವತಿ ದೊಣ್ಣೆಯೊಂದನ್ನು ತೆಗೆದುಕೊಂಡು ಹುಲಿಗೆ ಹೊಡೆದಿದ್ದಾಳೆ. ಆಗ ಹುಲಿ ತಿರುಗಿ ಬಿದ್ದಿದ್ದು, ಯುವತಿ ಮೇಲೆ ದಾಳಿ ಮಾಡಿದೆ. ಅಷ್ಟರೊಳಗೆ ಯುವತಿಯ ತಾಯಿ ಜೀಜಾಬಾಯಿ ಎಂಬವರು ಮಗಳನ್ನು ಮನೆಯೊಳಗೆ ಎಳೆದುಕೊಂಡಿದ್ದಾರೆ. ಹುಲಿ ದಾಳಿಯಿಂದ ತಾಯಿ-ಮಗಳಿಗೆ ಗಾಯವಾಗಿದ್ದು, ರೂಪಾಲಿ, ತಾಯಿಯೊಂದಿಗೆ ಇದರ ಸೆಲ್ಫಿ ತೆಗೆದುಕೊಂಡಿದ್ದಾಳೆ.

ತಾಯಿ-ಮಗಳು ಹೋರಾಟ ನಡೆಸಿದರೂ ಮೇಕೆಯನ್ನು ಹುಲಿಯ ಬಾಯಿಂದ ರಕ್ಷಿಸಿಕೊಳ್ಳಲಾಗಲಿಲ್ಲವೆನ್ನಲಾಗಿದ್ದು, ಆದರೂ ತಾಯಿ-ಮಗಳ ಧೈರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...