alex Certify
ಕನ್ನಡ ದುನಿಯಾ       Mobile App
       

Kannada Duniya

ಶೌಚಕ್ಕೆ ಹೋದ ಯುವಕನ ಕೈ ಸಿಕ್ಕಿ ಹಾಕಿಕೊಂಡಿದ್ದೆಲ್ಲಿ ಗೊತ್ತಾ…?

ಮುಂಬೈ: ಶೌಚಾಲಯಕ್ಕೆ ಹೋದ ಯುವಕ ಎಷ್ಟು ಹೊತ್ತಾದರೂ ಹೊರ ಬರಲೇ ಇಲ್ಲ….ಕಡೆಗೆ ಯುವಕನ ರಕ್ಷಣೆಗೆ ಅಗ್ನಿಶಾಮಕ ಸಿಬ್ಬಂದಿ ಬರಬೇಕಾಯಿತು.

ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಗಿಸಿದ್ದ 19 ವರ್ಷದ ಯುವಕ ಫೋನ್‌ ತೆಗೆದುಕೊಂಡು ಶೌಚಾಲಯಕ್ಕೆ ಹೋಗಿದ್ದಾನೆ. ಕೈ ಜಾರಿದ ಮೊಬೈಲ್‌ ಕಮೋಡ್‌ ಒಳಕ್ಕೆ ಬಿದ್ದಿದೆ. ಅಷ್ಟಕ್ಕೆ ಸುಮ್ಮನಾಗದ ಯುವಕ, ಕಮೋಡ್‌ನ ಗುಂಡಿಯೊಳಕ್ಕೆ ಕೈ ಹಾಕಿ ಮೊಬೈಲ್‌ ತೆಗೆಯಲು ಪ್ರಯತ್ನಿಸಿದ್ದಾನೆ. ಕೈ ಸಿಕ್ಕಿ ಹಾಕಿಕೊಂಡಿದೆ. ಕೈ ವಾಪಾಸ್‌ ಬಾರದಾದಗ ಸಹಾಯಕ್ಕಾಗಿ ಮನೆಯವರನ್ನು ಕೂಗಿದ್ದಾನೆ.

ಉತ್ತರ ಪ್ರದೇಶ ಮೂಲದ ಯುವಕ ರೋಹಿತ್‌ ರಾಜ್‌ ಭರ್‌, ಮುಂಬೈನಲ್ಲಿನ ತನ್ನ ಅಂಕಲ್‌ ಲಾಲ್‌ಮಣಿ ತ್ರಿಮುರತ್‌ ವರ್ಮ ಮನೆಗೆ ಬಂದಿದ್ದ. ವಿನೋಬ ಭಾವೆ ನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ವರ್ಮ ಕುಟುಂಬ ರೋಹಿತ್‌ನ ಕೂಗು ಕೇಳಿ, ಶೌಚಾಲಯಕ್ಕೆ ದೌಡಾಯಿಸಿದ್ದಾರೆ. ಹುಡುಗನ ಅವಸ್ಥೆ ಕಂಡು ಕಕ್ಕಾಬಿಕ್ಕಿಯಾದ ಕುಟುಂಬ ಸದಸ್ಯರು ಬಾಲಕನ ಕೈಯನ್ನು ಹೊರತೆಗೆಯುವಲ್ಲಿ ಸಫಲರಾಗಿಲ್ಲ. ನೆರೆಯವರೂ ರಕ್ಷಣಾ ಕಾರ್ಯಕ್ಕೆ ಅನೇಕ ತಂತ್ರಗಳನ್ನು ನಡೆಸಿದರಾದರೂ ಯಾವುದೇ ಫಲ ಸಿಕ್ಕಿಲ್ಲ. ನೆರೆಮನೆಯವರಲ್ಲಿ ಒಬ್ಬರು ಅಗ್ನಿಶಾಮಕಕ್ಕೆ ಕರೆ ಮಾಡಿ, ವಿಚಾರ ತಿಳಿಸಿದ್ದಾರೆ.

ವಿಚಾರ ತಿಳಿದು ಹುಡುಗನ ರಕ್ಷಣೆಗೆ ದೌಡಾಯಿಸಿ ಅಗ್ನಿಶಾಮಕ ಸಿಬ್ಬಂದಿ ಒಳ ಹೊಕ್ಕುವಷ್ಟರಲ್ಲಿ ಕಮೋಡ್‌ ಒಡೆದು, ಹುಡುಗನ ಕೈಯನ್ನು ಹೊರತೆಗೆಯಲಾಗಿದೆ. ಅಗ್ನಿಶಾಮಕ ವಿಭಾಗದ ಮುಖ್ಯ ಪೇದೆ ರವೀಂದ್ರನಾಥ್‌ ಸೂರ್ಯವಂಶಿ ಘಟನೆಯ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ.

ಮುಂಗೈ ನೋವು ಎನ್ನುತ್ತಿದ್ದ ಹುಡುಗನ್ನು ರಾಜ್‌ ವಾಡಿ ಆಸ್ಪತ್ರೆಗೆ ಕರೆದೊಯ್ದು ಎಕ್ಸ್‌-ರೇ ತೆಗೆಸಿ, ತಪಾಸಣೆ ಮಾಡಲಾಗಿದೆ. ಎಲುಬಿಗೆ ಯಾವುದೇ ಸಮಸ್ಯೆ ಆಗಿಲ್ಲ ಎಂಬುದು ಖಚಿತಗೊಂಡ ಬಳಿಕ ಹುಡುಗನನ್ನು ಆಸ್ಪತ್ರೆಯಿಂದ ಕಳುಹಿಸಿದ್ದಾರೆ. ಈ ಜಂಜಾಟದಲ್ಲಿ 14 ಸಾವಿರ ರೂ. ಮೊಬೈಲ್‌ ಫೋನ್‌ ಮಾತ್ರ ಸಿಕ್ಕಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...