alex Certify
ಕನ್ನಡ ದುನಿಯಾ       Mobile App
       

Kannada Duniya

‘ಎಚ್-1ಬಿ ವೀಸಾ ನೀತಿ ಬಗ್ಗೆ ಭಾರತಕ್ಕೆ ಬೇಡ ಆತಂಕ’

fab

ಅಮೆರಿಕ ಎಚ್-1ಬಿ ವೀಸಾ ನೀತಿಯನ್ನು ಬಿಗಿಗೊಳಿಸಲು ಮುಂದಾಗಿರೋದು ಭಾರತೀಯರಲ್ಲಿ ಕಳವಳ ಮೂಡಿಸಿದೆ. ಆದ್ರೆ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಳಿಕ ಡೊನಾಲ್ಡ್ ಟ್ರಂಪ್ ಎಚ್-1ಬಿ ವೀಸಾಗಳ ಮೇಲಿನ ಕ್ರಮಗಳನ್ನು ಬಿಗಿಗೊಳಿಸುವ ಸಾಧ್ಯತೆಗಳಿಲ್ಲ ಅಂತಾ ಭಾರತದ ಮಾಜಿ ರಾಯಭಾರಿ ಕೆ.ಪಿ.ಫ್ಯಾಬಿಯನ್ ಅಭಿಪ್ರಾಯಪಟ್ಟಿದ್ದಾರೆ.

ವೀಸಾ ನೀತಿ ಸಡಿಲಿಕೆಯಿಂದ ಟ್ರಂಪ್ ಗೆ ಲಾಭವಿದೆ, ಯಾಕಂದ್ರೆ ಸ್ಕಾಟ್ಲೆಂಡ್ ನಲ್ಲಿ ಅವರ ಗಾಲ್ಫ್ ಕ್ಲಬ್ ಗಳಿವೆ. ಜೊತೆಗೆ ಅಮೆರಿಕದ ಕಂಪನಿಗಳು ಹೊರದೇಶಗಳಿಗೆ ಹೋಗಬಾರದು ಅನ್ನೋದು ಕೂಡ ಅವರ ಉದ್ದೇಶ ಅಂತಾ ಫ್ಯಾಬಿಯನ್ ಹೇಳಿದ್ದಾರೆ. ಚುನಾವಣೆ ಸಮಯದಿಂದ್ಲೂ ಬಿಗಿ ವಲಸೆ ನೀತಿಗೆ ನನ್ನ ಆದ್ಯತೆ ಅಂತಾ ಟ್ರಂಪ್ ಹೇಳುತ್ತಲೇ ಬಂದಿದ್ದರು.

ವೀಸಾ ದುರ್ಬಳಕೆ ತಡೆಯಲು ಅಮೆರಿಕ ಬಿಗಿ ಕ್ರಮ ಕೈಗೊಂಡಿದ್ದೇ ಆದಲ್ಲಿ ಉದ್ಯೋಗ ಅರಸಿ ಅಮೆರಿಕಕ್ಕೆ ಹೋಗಲು ಬಯಸುವ ಭಾರತದ ಕುಶಲ ತಂತ್ರಜ್ಞಾನ ವೃತ್ತಿಪರರಿಗೆ ಭಾರೀ ಹೊಡೆತ ನೀಡಲಿದೆ. ಆದ್ರೆ ಭಾರತದ ಜೊತೆಗಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಟ್ರಂಪ್ ಗೆ ಸಮಯಬೇಕು, ಹಾಗಾಗಿ ಆತುರದಲ್ಲಿ ವಲಸೆ ನೀತಿ ಬಿಗಿಗೊಳಿಸುವ ಸಾಧ್ಯತೆಗಳಿಲ್ಲ ಎನ್ನುತ್ತಾರೆ ಫ್ಯಾಬಿಯನ್. ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಭಾರತಕ್ಕೆ ಅನುಕೂಲವಾಗಲಿದೆ ಅಂತಾ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...