alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಘಾತಕ್ಕೆ ಬಲಿಯಾದ್ಲು 5 ತಿಂಗಳ ಗರ್ಭಿಣಿ

ದೆಹಲಿಯ ಮಂಗೋಲ್ಪುರಿಯಲ್ಲಿ ಲಾರಿ ಡಿಕ್ಕಿಯಾಗಿ ಗರ್ಭಿಣಿ ಸಾವನ್ನಪ್ಪಿದ್ದಾಳೆ . ಅಪಘಾತದಲ್ಲಿ ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೃತ ಜಾನಕಿ ದೇವಿ 5 ತಿಂಗಳ ಗರ್ಭಿಣಿಯಾಗಿದ್ಲು. ಸಂಜೆ ಸುಮಾರು 8 ಗಂಟೆ ವೇಳೆಗೆ ಈ ದುರ್ಘಟನೆ ನಡೆದಿದೆ.

ಪತಿ ಉಮಾ ಶಂಕರ್ ಜೊತೆಗೆ ಜಾನಕಿ ಚೆಕಪ್ ಗಾಗಿ ಬಂದಿದ್ಲು. ಇಬ್ಬರೂ ಬೈಕ್ ನಲ್ಲಿ ಸಂಜಯ್ ಗಾಂಧಿ ಮೆಮೊರಿಯಲ್ ಆಸ್ಪತ್ರೆಗೆ ತೆರಳುತ್ತಿದ್ರು. ವೇಗವಾಗಿ ಬಂದ್ ಲಾರಿ, ಬೈಕ್ ಗೆ ಗುದ್ದಿದೆ. ಆ ರಭಸಕ್ಕೆ ಇಬ್ಬರೂ ಬೈಕ್ ನಿಂದ ಕೆಳಕ್ಕೆ ಬಿದ್ದಿದ್ದಾರೆ.

ಲಾರಿಯ ಚಕ್ರ ಗರ್ಭಿಣಿಯ ಮೈಮೇಲೆ ಹರಿದಿದೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಯಿಂದ ರೊಚ್ಚಿಗೆದ್ದ ಜನ, ಲಾರಿ ಚಾಲಕನನ್ನು ಹಿಡಿದು ಥಳಿಸಿದ್ದಾರೆ. ಮೃತ ಜಾನಕಿಗೆ 9 ವರ್ಷದ ಮಗ ಮತ್ತು 6 ವರ್ಷದ ಮಗಳಿದ್ದಾಳೆ. ಚಾಲಕ ಅಶು ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...